ಮುಸ್ಲಿಂ ಮಗುವಿಗೆ ಜವಳ

h25-nadaf
Published on

ಹುಬ್ಬಳ್ಳಿ: ಹಿಂದು ಸಂಪ್ರದಾಯದಲ್ಲಿ ಮಕ್ಕಳ ಜವಳ (ಮುಡಿ) ತೆಗೆಯುವುದು ಸಾಮಾನ್ಯ. ಆದರೆ, ಕುಂದಗೋಳ ತಾಲೂಕಿನ ಚಿಕ್ಕನೇರ್ತಿ ಗ್ರಾಮದ ಲಾಲ್​ಸಾಬ್ ನದಾಫ್ ಹಾಗೂ ಅಮೀನಾ ನದಾಫ್ ದಂಪತಿ ಮಸೀದಿಯೊಂದರಲ್ಲಿ ತಮ್ಮ ಪುತ್ರಿ ಆರೀಫಾಗೆ ಜವಳ ತೆಗೆಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು. ಮಸೀದಿಯಲ್ಲಿ ಹಿಂದು ಸಂಪ್ರದಾಯದಂತೆ ಉಡಿ ತುಂಬುವ ಕಾರ್ಯ ಹಾಗೂ ವೀಳ್ಯೆದೆಲೆಯನ್ನು ತಲೆಗೆ ಮುಟ್ಟಿಸಿ ಬಳಿಕ ಜವಳ ತೆಗೆಯಲಾಯಿತು. ನಾವಾಗಲಿ, ಮಕ್ಕಳಾಗಲಿ ಸರ್ವಧರ್ಮ ಸಮನ್ವಯತೆ ಮೆರೆಯಬೇಕು ಎನ್ನುತ್ತಾರೆ ಆರೀಫಾಳ ತಂದೆ ಲಾಲ್​ಸಾಬ್ ನದಾಫ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net