ಮುಸ್ಲಿಂ ಕುಟುಂಬದಿAದ ಗಣೇಶನಿಗೆ ಪೂಜೆ

ydg02
Published on

ದೋರನಹಳ್ಳಿ: ಮುಸ್ಲಿಂ ಸಮುದಾಯದ ಕುಟುಂಬವೊAದು ಗ್ರಾಮದಲ್ಲಿ ಯಾವುದೇ ಸದ್ದು ಗದ್ದಲವಿಲ್ಲದೆ ಕಳೆದ ೨೦ ವರ್ಷದಿಂದ ತಮ್ಮ ಮನೆಯಲ್ಲಿ ಪ್ರತಿ ವರ್ಷ ಲಂಬೋದರನನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಿರುವುದು ವಿಶೇಷವಾಗಿದೆ.

ಗ್ರಾಮದಲ್ಲಿ ಹಿಂದು, ಮುಸ್ಲಿಂ, ಕ್ರೆÊಸ್ತ , ಬೌದ್ಧ, ಜೈನ ಧರ್ಮ ಸೇರಿದಂತೆ ಹಲವು ಧರ್ಮ, ಜಾತಿಯ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಯಾರು ಒಂದು ದಿನವೂ ಇನ್ನೊಂದು ಧರ್ಮದವನ್ನು ವಿರೋಧಿಸಿಲ್ಲ. ಎಲ್ಲ ಧರ್ಮದವರು ಒಟ್ಟಾಗಿ ಬಾಳುತ್ತಾರೆ ಎಂಬುದಕ್ಕೆ ಮುಸ್ಲಿಂ ಕುಟುಂಬದ ಅಬ್ದುಲ್‌ನಬಿ ವಾಡಿ ಅವರ ಮನೆಯಲ್ಲಿ ಲಂಬೋದರನನ್ನು ಸ್ಥಾಪಿಸಿ ಪೂಜಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಗ್ರಾಮದಲ್ಲಿ ಕೈ ಬಂಡಿ ಭಜಿ ವ್ಯಾಪಾರಿ ಮಾಡಿಕೊಂಡ ಅಬ್ದುಲ್‌ನಬಿ ವಾಡಿ ೨೦ ವರ್ಷದಿಂದ ತಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಸ್ಥಾಪನೆ ಮಾಡಿ, ಕುಟುಂಬದ ಎಲ್ಲ ಸದಸ್ಯರು ಭಾಗವಹಿಸಿ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಯಲ್ಲಿ ಹಿಂದು ಧರ್ಮದ ವಿಧಿ-ವಿಧಾನದಂತೆ ನೆರವೇರಿಸುತ್ತಾರೆ. ಅಲ್ಲದೆ ಗಣೇಶನ ಮೂರ್ತಿ ಮನೆಯಲ್ಲಿ ಪ್ರತಿಷ್ಠಾಪಿಸಿದ ಐದು ದಿನಗಳವರೆ ಯಾವುದೇ ಮಾಂಸಹಾರ ಮಾಡುವುದಿಲ್ಲ. ಐದು ದಿನಗಳ ಬಳಿಕ ಗಣೇಶನನ್ನು ಮತ್ತು ವಿಶೇಷ ಪೂಜೆ ಸಲ್ಲಿಸಿ ಮೂರ್ತಿ ವಿಸರ್ಜನೆ ಮಾಡಲಾಗುತ್ತಿದೆ.


ಧರ್ಮ ಯಾವುದೇ ಇರಲಿ ನಾವು ಮಾಡುವ ಕಾಯಕ ಶುದ್ಧವಾಗಿರಬೇಕು. ಅಲ್ಲದೆ ಎಲ್ಲ ಧರ್ಮಗಳ ಸಂದೇಶ ಕೂಡ ಒಂದೆಯಾಗಿದೆ. ಅದನ್ನು ಅರಿತು ನಡೆದರೆ ನಮ್ಮೆಲ್ಲರ ಬಾಳು ಬಂಗಾರವಾಗಲು ಸಾಧ್ಯ ಎಂದು ಕಳೆದ ೨೦ ವರ್ಷದಿಂದ ಲಂಬೋದರ ಆರಾಧಿಸುತ್ತಿರುವ ಈ ಕುಟುಂಬ ನೆಮ್ಮದಿಯ ಜೀವನ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net