ಮುಸುಕಿನ ಜೋಳದ ಕಡ್ಡಿಯ ಮೆದೆ ಆಹುತಿ

09 HANUR 5
Published on

ಹನೂರು: ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದಲ್ಲಿ ಶನಿವಾರ ಆಕಸ್ಮಿಕ ಬೆಂಕಿ ತಗುಲಿ ಮುಸುಕಿನ ಜೋಳದ ಕಡ್ಡಿಯ ಮೆದೆ ಭಸ್ಮವಾಗಿದೆ.

ಗ್ರಾಮದ ರವಿ ಎಂಬುವರು ತಮ್ಮ ಮನೆ ಸಮೀಪ ಜಾನುವಾರುಗಳ ಮೇವಿಗಾಗಿ ಮುಸುಕಿನ ಜೋಳದ ಕಡ್ಡಿಯನ್ನು ಮೆದೆ ಹಾಕಿದ್ದರು. ಆದರೆ ಸಂಜೆ 3.30ರಲ್ಲಿ ಆಕಸ್ಮಿಕ ಬೆಂಕಿ ತಗುಲಿ ಆಹುತಿಯಾಗಿದೆ. ಬೆಂಕಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದರು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್‌ನಾಯಕ್, ಸಿಬ್ಬಂದಿ ಪೆರಿಯನಾಯಗಂ, ಕೃಷ್ಣಮೂರ್ತಿ, ಪ್ರವೀಣ್, ಮುನಿಶಾಂತ, ನಾಗೇಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net