ಮುಳ್ಳೂರು ಶಾಲೆಯಲ್ಲಿ ಮಾದರಿ ಶಿಕ್ಷಕ

oct 01 ss 2 jirape tyaraguthiruvudu
ಸಿಮೆಂಟ್ ಹಾಗೂ ನಿರುಪಯುಕ್ತ ವಸ್ತುಗಳಿಂದ ಶಿಕ್ಷಕ ಸತೀಶ್ ಅವರು ಪ್ರಾಣಿಗಳ ಮಾದರಿಗಳನ್ನು ತಯಾರಿಸುತ್ತಿರುವುದು.
Published on

ಶನಿವಾರಸಂತೆ:
ವಿದ್ಯಾರ್ಥಿಗಳನ್ನು ಜ್ಞಾನವಂತರನ್ನಾಗಿಸಲು ಸ್ವಂತ ಹಣವನ್ನು ವಿನಿಯೋಗಿಸಿ, ಶಾಲೆಯನ್ನು ಅಭಿವೃದ್ಧಿಪಡಿಸುವ ಶಿಕ್ಷಕರು ತೀರಾ ವಿರಳ. ಇಂತಹವರ ಸಾಲಿಗೆ ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಶಾಲೆಯ ಶಿಕ್ಷಕ ಸತೀಶ್ ಸೇರಿದ್ದು, ಇತರರಿಗೆ ಮಾದರಿಯಾಗಿದ್ದಾರೆ.

ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಗಳಿದ್ದು, ಪ್ರಸ್ತುತ 38 ಮಂದಿ ಮಕ್ಕಳಿದ್ದಾರೆ. 2010ರಿಂದ ಸದರಿ ಶಾಲೆಗೆ ಸಿ.ಎಸ್.ಸತೀಶ್ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸತೀಶ್ ಅವರು ತಮ್ಮ ಸಂಬಳದಲ್ಲಿ ಒಂದಷ್ಟು ಹಣವನ್ನು ಶಾಲೆ ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿದ್ದಾರೆ. ಕಳೆದ 12 ವರ್ಷಗಳಿಂದ ಪ್ರತಿ ತಿಂಗಳು ಯಾವುದಾದರೊಂದು ಪರಿಕರಗಳನ್ನು ತರುವ ಮೂಲಕ ಶಾಲೆ ಮತ್ತು ಬಡವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ.

ಇದೀಗ ಕೊಡಗು ಜಿಲ್ಲೆಯಾದ್ಯಂತ ದಸರಾ ರಜೆ ನೀಡಿದ್ದು, ಈ ರಜೆಯನ್ನು ಕಾಲಹರಣ ಮಾಡದೆ ಶಾಲೆಯಲ್ಲಿ ದಿನಕ್ಕೊಂದು ಪ್ರಾಣಿಗಳ ಮಾದರಿ ತಯಾರು ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಸಿಮೆಂಟ್ ಹಾಗೂ ಕಬ್ಬಿಣ ಹಾಗೂ ಪ್ಲಾಸ್ಟಿಕ್ ಸೇರಿ ಇನ್ನಿತರ ನಿರುಪಯೋಗಿ ವಸ್ತುಗಳನ್ನು ಬಳಕೆ ಮಾಡಿಕೊಂಡು ಜಿಂಕೆ, ಹುಲಿ, ಜಿರಾಫೆ, ಕುದುರೆ, ಕಾಂಗರೂ, ಕತ್ತೆ, ಚಿಂಪಾಂಜಿ, ಘೆಂಡಾಮೃಗ, ಡೈನೋಸಾರಸ್, ಸೌರವ್ಯೆಹ ಮಾದರಿ ಸೇರಿದಂತೆ ಕಣ್ಮರೆಯಾಗುತ್ತಿರುವ ಪ್ರಾಣಿ-ಪಕ್ಷಿಗಳ ಮಾದರಿ ತಯಾರಿಸಿ ನೈಜವಾಗಿ ಕಾಣುವಂತೆ ಮಾಡುತ್ತಿದ್ದಾರೆ.

ಒಂದೊಂದು ಮಾದರಿ ತಯಾರಿಸಲು ಸುಮಾರು 2 ಸಾವಿರ ರೂ. ವೆಚ್ಚವಾಗುತ್ತಿದೆ. ರಜೆ ದಿನವಾದರೂ ಬೆಳಗ್ಗೆ 8ರಿಂದ ಸಂಜೆ 6 ಗಂಟೆಯವರೆಗೂ ಸ್ವತಃ ತಾವೇ ಪ್ರಾಣಿಗಳ ಮಾದರಿ ತಯಾರಿಸುವ ಜತೆಗೆ ಮಕ್ಕಳಿಗೂ ಕಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net