ಮುಳ್ಳುಸೋಗೆ ಗ್ರಾಪಂನಲ್ಲಿ ಗಾಂಧಿ, ಶಾಸ್ತ್ರೀ ಜಯಂತಿ

02Kush01
ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದೂರ್ ಶಾಸ್ತ್ರೀ ಜಯಂತಿ ಅಂಗವಾಗಿ ಶುದ್ಧ ನೀರಿನ ಘಟಕದ ಟ್ಯಾಂಕ್ ಸುತ್ತಮುತ್ತ ಶ್ರಮದಾನ ಮಾಡಲಾಯಿತು. ಅಧ್ಯಕ್ಷ ಚೆಲುವರಾಜು, ಜಯಮ್ಮ, ವೇದಾವತಿ, ಕುಮಾರ್, ಸುಮೇಶ್ ಇತರರು ಹಾಜರಿದ್ದರು.
Published on

ಕುಶಾಲನಗರ: ಮುಳ್ಳುಸೋಗೆ ಗ್ರಾಪಂ ವತಿಯಿಂದ ಭಾನುವಾರ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದೂರ್ ಜಯಂತಿ ಆಚರಿಸಲಾಯಿತು. ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಚೆಲುವರಾಜು ಅವರು ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಂಚಾಯಿತಿ ಆವರಣದಲ್ಲಿ ಜಲ ಜೀವನ್ ಮಿಷನ್ ವತಿಯಿಂದ ನಿರ್ಮಾಣ ಮಾಡಿರುವ ಶುದ್ಧ ನೀರಿನ ಘಟಕದ ಟ್ಯಾಂಕ್ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಆಡಳಿತ ಮಂಡಳಿಯ ಸದಸ್ಯರು ಹಾಗೂ ಗಮನಕೊಲ್ಲಿಯ ಗ್ರಾಮಸ್ಥರು ಸೇರಿ ಶಾಲಾ ಆವರಣ ಹಾಗೂ ಮುಖ್ಯ ರಸ್ತೆಯಲ್ಲಿ ಶ್ರಮದಾನ ನಡೆಸಿದರು. ಈ ಸಂರ್ಭದಲ್ಲಿ ಉಪಾಧ್ಯಕ್ಷೆ ಜಯಮ್ಮ, ಪಿಡಿಒ ಸುಮೇಶ್, ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net