ಮುಳುಗಿದ ಹೆಬ್ಬಾಳೆ ಸೇತುವೆ

5kls1 web
Published on

ಕಳಸ: ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಭದ್ರಾ ನದಿ ನೀರಿನ ಹರಿವು ಹೆಚ್ಚಾಗಿದ್ದು ಶುಕ್ರವಾರ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡಿತ್ತು. ಇದರಿಂದ ಕೆಲ ಗಂಟೆಗಳ ಕಾಲ ಕಳಸ-ಹೊರನಾಡು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಲಘು ವಾಹನಗಳು ಪರ್ಯಾಯ ರಸ್ತೆ ಹಳುವಳ್ಳಿ-ಹೊರನಾಡು ರಸ್ತೆಯನ್ನು ಬಳಸಿಕೊಂಡರೆ, ಭಾರಿ ವಾಹನಗಳು ನೀರು ಇಳಿಕೆಯಾಗುವವರೆಗೆ ಕಾದು ನಿಂತಿದ್ದವು. ಪ್ರವಾಸಿಗರು ತೊಂದರೆ ಪಡುವಂತಾಯಿತು.

ಕಳಸದಲ್ಲಿ ಸಾಧಾರಣ ಮಳೆ ಇದ್ದರೂ ಕುದುರೆಮುಖ ಭಾಗದಲ್ಲಿ ಬಹಳಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ನದಿಯ ನೀರಿನ ಮಟ್ಟ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net