ಮುಳಬಾಗಿಲಿನಲ್ಲಿ ಮಂಕಿಕ್ಯಾಪ್ ಆತಂಕ | Monkeycap

ಶಿಕ್ಷಕರ ಕಾಲನಿಯಲ್ಲಿ ಸರಣಿ ಕಳವು ಸಿಸಿ ಕ್ಯಾಮರಾದಲ್ಲಿ ಶಂಕಿತರ ಚಲನವಲನ ಸೆರೆ
crime
ಮುಳಬಾಗಿಲಿನ ಶಿಕ್ಷಕರ ಕಾಲನಿಯಲ್ಲಿ ಮಂಕಿ ಕ್ಯಾಪ್ ಧರಿಸಿ ಓಡಾಡುತ್ತಿರುವ ಕಳ್ಳರು.
Published on

ಮುಳಬಾಗಿಲು: ಶಿಕ್ಷಕರ ಕಾಲನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಸರಣಿ ಕಳವು ಪ್ರಕರಣಗಳ ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಭಾನುವಾರ ಮಧ್ಯರಾತ್ರಿ ಮಂಕಿಕ್ಯಾಪ್ ಧರಿಸಿದ್ದ ನಾಲ್ವರು ಶಂಕಿತರು ಕಾಲನಿಯಲ್ಲಿ ಸಂಚರಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾಲನಿ ನಿವಾಸಿ ವಿಜಯಕುವಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಕುಟುಂಬದವರು ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು ಜೂ.19ರಂದು ರಾತ್ರಿ ಮನೆಯ ಬೀಗ ಮುರಿದು ಒಳನುಗ್ಗಿ 124ಗ್ರಾಂ ಚಿನ್ನಾಭರಣ, 5 ಕೆಜಿ ಬೆಳ್ಳಿ ಹಾಗೂ 1.75 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದರು.

ಇದೇ ರೀತಿ ಮುತ್ಯಾಲಪೇಟೆಯ ಶಿವಕೇಶವನಗರದ ನಿವಾಸಿ ನೇತ್ರಾವತಿ ಅವರ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ತಂದೆಯ ಮನೆಗೆ ತೆರಳಿದ್ದ ವೇಳೆ ಮನೆಯ ಬೀಗ ಒಡೆದು ಒಳನುಗ್ಗಿದ್ದ ಕಳ್ಳರು ಬೀರುವಿನಲ್ಲಿದ್ದ 20 ಗ್ರಾಂ ಚಿನ್ನಾಭರಣ ಹಾಗೂ 40 ಸಾವಿರ ರೂ.ನಗದು ಕಳವು ವಾಡಿದ್ದಾರೆ ಎನ್ನಲಾಗಿದ್ದು, ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net