ಮುಳಗುಂದದಲ್ಲಿ ಕಡುಬಿನ ಕಾಳಗದ ಸಂಭ್ರಮ

26 mul3
Published on

ಮುಳಗುಂದ: ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ 162ನೇ ಸ್ಮರಣೋತ್ಸವದ ಅಂಗವಾಗಿ ಶ್ರೀಮಠದಿಂದ ಕಲ್ಮಠದವರೆಗೆ ಸಕಲ ವಾದ್ಯ ವೈಭವಗಳೊಂದಿಗೆ ಕಡುಬಿನ ಕಾಳಗ ಶುಕ್ರವಾರ ಸಂಜೆ ಜರುಗಿತು.

ಮಧ್ಯಾಹ್ನ ಅನ್ನ ದಾಸೋಹ ಸೇವೆ, ಸಂಜೆ 5 ಗಂಟೆಗೆ ರಥೋತ್ಸವ ಸಂಭ್ರಮದಿಂದ ನಡೆಯಿತು. ನವಲಗುಂದದ ಗವಿಮಠದ ಬಸವಲಿಂಗ ಶ್ರೀಗಳು ಅಪಾರ ಭಕ್ತ ಸಮೂಹದ ಮಧ್ಯ ಕಡುಬಿನ ಕಾಳಗ ನಡೆಸಿಕೊಟ್ಟರು. ಮುಳಗುಂದ ಹಾಗೂ ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಅಪಾರ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net