

ಭಟ್ಕಳ: ಮುರ್ಡೆಶ್ವರದ ಶಿಥಿಲಗೊಂಡ ರಥವನ್ನು ಬದಲಿಸಿ ನೂತನ ಬ್ರಹ್ಮರಥದಲ್ಲಿ ಮಾತ್ಹೋಬಾರನ ರಥೋತ್ಸವ ಮಾಡಿಸಬೇಕು ಎನ್ನುವ ಡಾ. ಆರ್.ಎನ್. ಶೆಟ್ಟಿಯವರ ಸಂಕಲ್ಪವನ್ನು ಅವರ ಪುತ್ರ ಸುನೀಲ ಶೆಟ್ಟಿ ಮತ್ತು ಅವರ ಕುಟುಂಬದವರು ಸಾಕಾರಗೊಳಿಸಿದ್ದಾರೆ. ಗುರುವಾರ ಮುರ್ಡೆಶ್ವರಕ್ಕೆ ಆಗಮಿಸಿದ ನೂತನರಥಕ್ಕೆ ನೆರೆದ ಸಾವಿರಾರು ಭಕ್ತರು ಜಯಕಾರದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
ಕೋಟೇಶ್ವರ ಕುಂಭಾಶಿಯಿಂದ ಆಗಮಿಸಿದ ಬ್ರಹ್ಮರಥಕ್ಕೆ ಮುರ್ಡೆಶ್ವರದ ಮಹಾದ್ವಾರದ ಬಳಿ ವಿಶೇಷ ಪೂಜೆ ನಡೆದು ಪುರಪ್ರವೇಶ ನಡೆಯಿತು. ಊರಿನ ನಾಗರಿಕರು, ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ, ವಿವಿಧ ವೇಷಭೂಷಣ ಕಲಾತಂಡಗಳೊಂದಿಗೆ ಮೆರವಣಿಗೆಯ ಮೂಲಕ ಓಲಗಮಂಟಪದವರೆಗೆ ರಥ ಆಗಮಿಸಿತು.