ಮುರೇಹಳ್ಳಿ ಬೀರ್ಮ್ ಆರ್ಮಿ ತಂಡದಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ.

ಮುರೇಹಳ್ಳಿ ಬೀರ್ಮ್ ಆರ್ಮಿ ತಂಡದಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ.
Published on


ಬೇಲೂರು; ನಮ್ಮಿಂದ ಸಾಧ್ಯವಾಷ್ಟು ಸಹಾಯ ಮಾಡೋಣ. ಸಹಾಯ ಪಡೆದವರು ಉತ್ತಮ ಸ್ಥಾನಕ್ಕೆ ಹೋದನಂತರ ತಮ್ಮಿಂದ ಸಾಧ್ಯವಾಷ್ಟು ಸಮಾಜಕ್ಕೆ ಸಹಾಯ ಮಾಡಿ ಎಂದು ಭೀಮ್ ಆರ್ಮಿ ತಂಡದ ಅಧ್ಯಕ್ಷ ಶಿವು ಮುರೇಹಳ್ಳಿ ತಿಳಿಸಿದರು.


ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಮುರೇಹಳ್ಳಿ ಗ್ರಾಮದ ಸರಕಾರಿ ಶಾಲೆಯಲ್ಲಿ ಭೀರ್ಮ್ ಆರ್ಮಿ ತಂಡದ ವತಿಯಿಂದ ನಡೆದ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಸಮಾಜದಲ್ಲಿ ಸಹಾಯ ಮನೋಭಾವವನ್ನು ಅಳವಡಿಸಿಕೊಳ್ಳುವುದು ಬಹುಮುಖ್ಯ, ನಮ್ಮಿಂದ ಸಾಧ್ಯವಾದಷ್ಟು ಅವಶ್ಯಕತೆ ಇರುವವರಿಗೆ ಸಹಾಯ ಮಾಡೋಣ. ಸಹಾಯ ಪಡೆದವರು ಮುಂದಿನ ದಿನಗಳಲ್ಲಿ ಒಂದೊಳ್ಳೆ ಸ್ಥಾನಕ್ಕೆ ಹೋದ ನಂತರ ಇತರರಿಗೂ ತಮ್ಮಿಂದ ಆಗುವ ಸಹಾಯ ಮಾಡಿ ನೆರವಾಗಿ ಎಂದು ಮನವಿ ಮಾಡಿದರು.


ಕಾರ್ಯಕ್ರಮದಲಿ ಮುರೇಹಳ್ಳಿ ಗ್ರಾ.ಪಂ ಸದಸ್ಯರಾದ ಯೋಗೇಶ್, ಸಮಾಜ ಸೇವಕ ಮನು, ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರವಿ, ಶಾಲೆ ಮುಖ್ಯ ಶಿಕ್ಷಕರಾದ ಶ್ರಿವತ್ಸವ್,ಪುಟ್ಟರಾಜು, ಭೀಮ್ ಆರ್ಮಿ ತಂಡದ ಕೃಷ್ಣ ಮೂರ್ತಿ, ಚಂದ್ರಶೇಖರ್, ಅವಿನಾಶ್ , ಅಮೃತ್, ಮೂರ್ತಿ, ಪ್ರದೀಪ್, ಉಮೇಶ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net