ಮುರುಘಾಮಠ ಜಾತ್ರಾ ಸಂಭ್ರಮ

30 Dwd 11
Published on

ಧಾರವಾಡ: ನಗರದ ಮುರುಘಾಮಠದ ಶ್ರೀಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರ ಹಷೋದ್ಗಾರದ ಮಧ್ಯೆ ಭವ್ಯ ರಥೋತ್ಸವವು ಗುರುವಾರ ಜರುಗಿತು. ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ರಥೋತ್ಸವಕ್ಕೆ ಚಾಲನೆ ನೀಡಿದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹಾಗೂ ನಾಡಿನ ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳ ಭಾವಚಿತ್ರವನ್ನೊಳಗೊಂಡ ಭವ್ಯ ರಥವು ಮಠದ ಆವರಣದಿಂದ ಹೊರಟು ಡಿಪೋ ವೃತ್ತದವರೆಗೆ ಸಾಗಿ ಮಠಕ್ಕೆ ಮರಳಿತು. ಸಾವಿರಾರು ಭಕ್ತರು ಅಜ್ಜನ ತೇರನ್ನು ಎಳೆದು ಕೃತಾರ್ಥರಾದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಇದಕ್ಕೂ ಮುನ್ನ ಡಾ. ಶಿವಮೂರ್ತಿ ಮುರುಘಾ ಶರಣರು ಜಾತ್ರೆಗೆ ಆಗಮಿಸಿದ ಭಕ್ತರಿಗೆ ಆಯೋಜಿಸಿದ್ದ ಸಾಮೂಹಿಕ ಅನ್ನಪ್ರಸಾದ ಸೇವೆಗೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net