ಮುರುಘಾ ಮಠದ ಅನಾಥ ಆಶ್ರಮಕ್ಕೆ ಅನುದಾನ, ಪಡಿತರ ಭರವಸೆ

IMAG6272_1.jpg
Published on

ಚಿತ್ರದುರ್ಗ: ಶ್ರೀ ಮುರುಘಾಮಠದ ಅನಾಥ ಆಶ್ರಮಕ್ಕೆ ಸರ್ಕಾರದಿಂದ ಅನುದಾನ ಕೊಡಿಸುವ ಕುರಿತು ಪರಿಶೀಲನೆ ನಡೆಸುವುದಾಗಿ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಅ ಜೊಲ್ಲೆ ಭರವಸೆ ನೀಡಿದರು.

ಶ್ರೀ ಮಠದಲ್ಲಿ ಭಾನುವಾರ ಆಯೋಜಿಸಿದ್ದ ೩೦ನೇ ವರ್ಷ ಮೊದಲ ತಿಂಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿ, ಅನಾಥ ಆಶ್ರಮಕ್ಕೆ ಅನುದಾನ ಜತೆಗೆ ಸ್ಥಗಿತಗೊಂಡಿರುವ ಪಡಿತರ ವ್ಯವಸ್ಥೆ ಯನ್ನು ಪುನರ್ ಆರಂಭಿಸುವುದಾಗಿ ಹೇಳಿದರು.

ಚಿಕ್ಕೋಡಿ ಸಂಸದ‌ ಅಣ್ಣಾ‌ಸಾಹೇಬ ಜೊಲ್ಲೆ, ಮಾರುಕಟ್ಟೆ ಇಲಾಖೆ ‌ನಿರ್ದೇಶಕ ಸಿ.ಎಸ್.ಕರಿಗೌಡ, ಅಕ್ಕಿ ಅಲೂರಿನ ಶಿವಬಸವ ಸ್ವಾಮೀಜಿ ಮೊದಲಾದ ಗಣ್ಯರು ಇದ್ದರು. ಡಾ.ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net