ಮುರುಘಾ ಮಠಕ್ಕೆ ಆಡಳಿತ ಸಮಿತಿ

IMG_20230525_115108-002
Published on

ಚಿತ್ರದುರ್ಗ: ನಗರದ ಶ್ರೀ ಮುರುಘಾಮಠದ ಪರಂಪರೆ ಉಳಿವಿಗಾಗಿ ತಮ್ಮ ನೇತೃತ್ವದಲ್ಲಿ ಸಭೆ ಕರೆದು ಆಡಳಿತ ಸಮಿತಿ ರಚಿಸುವಂತೆ ವೀರಶೈವ ಲಿಂಗಾಯಿತ ಯುವ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಎಂ.ಮಂಜುನಾಥ್ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಒತ್ತಾಯಿ ಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಠಕ್ಕೆ ಆಡಳಿತಾಧಿಕಾರಿ ನೇಮಿಸಿದ್ದ ಸರ್ಕಾರದ ಹಾಗೂ ಶರಣರ ಅಧಿಕಾರ ನಿರ್ಬಂಧಿಸಿದ್ದ ಜಿಲ್ಲಾ ನ್ಯಾಯಾಲಯದ ಆದೇಶಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ವೀರಶೈವ ಸೇರಿ ಸಮಾಜದ ಎಲ್ಲ ವರ್ಗದವರನ್ನು,ಮಠದ ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಸಮಿತಿ ರಚಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಮಠದ ಪೂಜಾ ಕೈಂಕರ್ಯ ಮತ್ತು ಪರಂಪರೆ ಉಳಿವಿನ ಹೋರಾಟವನ್ನು ವೇದಿಕೆ ಬೆಂಬಲಿಸಿಕೊಂಡು ಬಂದಿದೆ ಎಂದರು. ವೇದಿಕೆ ಗೌರವಾಧ್ಯಕ್ಷ ಕೆ.ಸಿ.ಗಂಗಾಧರ್,ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ಗಿರೀಶ್,ಕಾರ‌್ಯದರ್ಶಿ ಸಿ.ಬಿ.ನಾಗರಾಜ್,ತಾಲೂಕು ಅಧ್ಯಕ್ಷ ಎಚ್.ಪ್ರಶಾಂತ್‌ರೆಡ್ಡಿ,ನಗರಾಧ್ಯಕ್ಷ ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net