ಮುರಾರ್ಜಿ ಶಾಲೆಗಳಲ್ಲಿನ್ನು ಪಿಯು ಆರಂಭ -ಸಚಿವ ಕೋಟ

20SIRSI6.jpg
Published on

ವಿಜಯವಾಣಿ ಸುದ್ದಿಜಾಲ ಶಿರಸಿ

ರಾಜ್ಯದಲ್ಲಿರುವ ಎಲ್ಲ ಮುರಾರ್ಜಿ ವಸತಿ ಶಾಲೆಗಳಲ್ಲಿಯೂ ಪಿಯುಸಿ ಶಿಕ್ಷಣ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಕಲ್ಲಿ ಮುರಾರ್ಜಿ ವಸತಿ ಶಾಲೆಗೆ ಬುಧವಾರ ಭೇಟಿ ನೀಡಿ,  ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದರು. ಭೋಜನಾಲಯಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳ  ಕುಶಲೋಪರಿ ವಿಚಾರಿಸಿದರು.

ನಂತರ ಪತ್ರಕರ್ತರ ಜತೆ ಮಾತನಾಡಿದ ಸಚಿವರು, 'ದಬಡವರು ಮತ್ತು ಪ್ರತಿಭಾವಂತ ಮಕ್ಕಳಿಗೆ ಮುರಾರ್ಜಿ ಶಾಲೆಗಳು ಉತ್ತಮ ವೇದಿಕೆ ಆಗಿದೆ. 6ನೇ ತರಗತಿಯಿಂದ ಪಿಯುಸಿ ಶಿಕ್ಷಣದವರೆಗೂ ಒಂದೇ ಸ್ಥಳದಲ್ಲಿ ವಿದ್ಯಾಭ್ಯಾಸ ದೊರೆಯುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಮುರಾರ್ಜಿ ಶಾಲೆಗಳನ್ನು ಪಿಯುವರೆಗೂ ವಿಸ್ತರಿಸುವ ಕುರಿತಂತೆ ಶಿಕ್ಷಣ ಇಲಾಖೆಯೊಂದಿಗೂ ಮಾತನಾಡಲಾಗಿದೆ ಎಂದರು. ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಕಡಿಮೆ ಇದೆ. ಅವರ ವೇತನ ಹೆಚ್ಚಿಸುವ ಕುರಿತಂತೆ ಯತ್ನ ನಡೆಯುತ್ತಿದ್ದು, ಹಣಕಾಸು ವಿಭಾಗದಿಂದ ಒಪ್ಪಿಗೆಗೆ ಕಾಯುತ್ತಿದ್ದೇವೆ ಎಂದರು.
ಅಪರ ಜಿಲ್ಲಾಧಿಕಾರಿ ಕೆ.ರಾಜು ಮೊಗವೀರ, ಉಪವಿಭಾಗಾಧಿಕಾರಿ ದೇವರಾಜ ಆರ್., ತಹಸೀಲ್ದಾರ್ ಶ್ರೀಧರ ಮುಂದಲಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net