ಮುರಾರ್ಜಿ ಶಾಲೆ ವಿದ್ಯಾರ್ಥಿಗಳಿಗೆ ಅನಾರೋಗ್ಯ

21
Published on

ಹುಲಿಯೂರುದುರ್ಗ: ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಲ್ಲಿ ಅನಾರೋಗ್ಯ ಹಿನ್ನೆಲೆ ತಾಪಂ ಇಒ ನಾರಾಯಣ್​ ನಿರ್ದೇಶನದ ಮೇರೆಗೆ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಮರಿಯಪ್ಪ ಗುರುವಾರ ವಸತಿ ಶಾಲೆಗೆ ಭೇಟಿ ನೀಡಿ, ವಸ್ತು ಸ್ಥಿತಿ ಪರಿಶೀಲಿಸಿದರು.

ವಸತಿ ಶಾಲೆಯ ಸುಮಾರು 25&30 ಮಕ್ಕಳಲ್ಲಿ ನೆಗಡಿ, ಕೆಮ್ಮು ಕಂಡುಬಂದಿದು,್ದ ಉಳಿದಂತೆ ಹದಿನೈದು ಮಕ್ಕಳ ಕೈಗಳಲ್ಲಿ ತುರಿಕೆ, ಅಲರ್ಜಿ ಉಂಟಾಗಿರುವುದು ಭೇಟಿ ವೇಳೆ ಬೆಳಕಿಗೆ ಬಂದಿದೆ. ಹಾಸ್ಟೆಲ್​ನ 180 ಮಕ್ಕಳಿಗೆ ಬೆಡ್​ ವ್ಯವಸ್ಥೆಯಿಲ್ಲದೆ ನೆಲದ ಮೇಲೆ ಮಲಗುವ ಸ್ಥಿತಿ ಇದ್ದು, 250 ಮಕ್ಕಳಿರುವ ವಸತಿ ಶಾಲೆಯಲ್ಲಿ ವಿದ್ಯುತ್​ ವ್ಯತ್ಯಯ ಉಂಟಾದರೆ ಪರ್ಯಾಯ ವ್ಯವಸ್ಥೆಯಿಲ್ಲ. ಶುದ್ಧಕುಡಿಯುವ ನೀರಿನ ಟಕವೂ ಇಲ್ಲದಿರುವುದರಿಂದ ಶುದ್ಧ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಇದೆ. ಇನ್ನು ಸೊಲಾರ್​ ಪ್ಯಾನಲ್​ಗಳನ್ನು ಸ್ವಚ್ಛಗೊಳಿಸದ ಕಾರಣ ಮಕ್ಕಳಿಗೆ ಸರಿಯಾದ ಬಿಸಿನೀರು ಸಿಗದಂತಾಗಿದ್ದು, ಈ ಎಲ್ಲ ಕಾರಣಗಳಿಂದ ಮಕ್ಕಳ ಆರೋಗ್ಯ ಹದಗೆಡುತ್ತಿರುವ ಶಂಕೆ ವ್ಯಕ್ತವಾಗಿದೆ. ಬಾಲ ಸ್ವಾಸ್ಥ್ಯ ಮಿಷನ್​ ಅಡಿಯಲ್ಲಿ ಎಲ್ಲ ಮಕ್ಕಳಿಗೂ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ, ಅನಾರೋಗ್ಯ ಕಂಡುಬಂದ ಮಕ್ಕಳಿಗೆ ಸ್ಥಳದಲ್ಲಿ ಚಿಕಿತ್ಸೆ ನೀಡಲಾಯಿತು. ಅಡುಗೆ ಮತ್ತು ಸ್ವಚ್ಛತಾ ಸಿಬ್ಬಂದಿಗೆ ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ತಿಳಿವಳಿಕೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net