ಮುರಾರ್ಜಿ ವಸತಿ ಶಾಲೆ ಐಸೋಲೇಷನ್ ವಾರ್ಡ್​

13blk4
Published on

ಭಾಲ್ಕಿ: ಕೋನಮೇಳಕುಂದಾ ಗ್ರಾಮದ ಹೊರವಲಯದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಈಶ್ವರ ಖಂಡ್ರೆ ಸೋಮವಾರ ಭೇಟಿ ನೀಡಿ ಕರೊನಾ ಸೋಂಕು ಕಂಡುಬಂದರೆ ತಕ್ಷಣ ಚಿಕಿತ್ಸೆ ನೀಡುವ ಸಿದ್ಧತೆ ನಿಮಿತ್ತ ಐಸೋಲೇಷನ್ ವಾರ್ಡ್​ಗಳ ಸ್ಥಳ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ತಾಲೂಕಿನ ಒಬ್ಬರಲ್ಲಿಯೂ ಕರೊನಾ ಸೋಂಕು ಕಾಣಿಸಕೊಳ್ಳದಿರುವುದು ಸಮಾಧಾನ ತಂದಿದೆ. ಆದರೂ ಯಾರಲ್ಲಾದರೂ ಪ್ರಾಥಮಿಕ ಹಂತದಲ್ಲಿ ಲಕ್ಷಣಗಳು ಕಂಡು ಬಂದರೆ, ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಐಸೋಲೇಷನ್ ವಾರ್ಡ್​ ನಿರ್ಮಿಸಬೇಕು ಎಂಬ ಚಿಂತನೆಯಿದ್ದು, ವಾತಾವರಣವೂ ಪೂರಕವಾಗಿದೆ. ಕರೊನಾ ಲಕ್ಷಣ ಕಾಣಿಸಿಕೊಳ್ಳುವ ಸುಮಾರು 100 ಜನರಿಗೆ ಚಿಕಿತ್ಸೆ ನೀಡಲು ಬೇಕಾಗುವ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ತಾಪಂ ಇಒ ಬಸವರಾಜ ನಾಯ್ಕರ್, ಡಿಎಸ್ಪಿ ಡಾ.ದೇವರಾಜ ಬಿ, ತಾಲೂಕು ವೈದ್ಯಾಧಿಕಾರಿ ಡಾ.ಜ್ಞಾನೇಶ್ವರ ನಿರಗೂಡ, ಸಿಎಂಒ ಡಾ.ಖಾದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net