ಮುನಿಸುಕೊಂಡು ಹೊರ ನಡೆದ ಸಚಿವ ಸಂತೋಷ ಲಾಡ್

IMG-20240310-WA0032
Published on

ವಿಜಯವಾಣಿ ಸುದ್ದಿಜಾಲ, ಹುಬ್ಬಳ್ಳಿ,
ಹು ಧಾ ಮಹಾನಗರ ಪಾಲಿಕೆಯ ನೂತನ ಸಭಾಭವನ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಿಂದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮುನಿಸುಕೊಂಡು ಹೊರ ನಡೆದ ಘಟನೆ ಭಾನುವಾರ ನಡೆಯಿತು.

ಹು ಧಾ ಮಹಾನಗರ ಪಾಲಿಕೆ ಆಯೋಜಿಸಿದ್ದ ಶಂಕುಸ್ಥಾಪನೆ ಕಾರ್ಯಕ್ರಮದ ಬ್ಯಾನರ್ ನಲ್ಲಿ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೋ ಇಲ್ಲದಕ್ಕೆ ಸಚಿವ ಲಾಡ್ ಮುನಿಸುಕೊಂಡು ಹೊರ ನಡೆದರು.

ಬಳಿಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶಂಕು ಸ್ಥಾಪನೆ ನೆರವೇರಿಸಿದರು.

ಶಂಕುಸ್ಥಾಪನೆ ಕಾರ್ಯಕ್ರಮದ ಬ್ಯಾನರ್ ನಲ್ಲಿ ಸಿಎಂ ಫೋಟೋ ಹಾಕದಿದ್ದದ್ದು ಅಕ್ಷಮ್ಯ. ಸಭಾಭವನಕ್ಕಾಗಿ ಪಾಲಿಕೆ ಆವರಣದಲ್ಲಿನ ಹಳೇ ಕಟ್ಟಡವನ್ನು ಕೆಡವಲು ಸರ್ಕಾರದ ಒಪ್ಪಿಗೆ ಪಡೆದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಮಾಧ್ಯಮಗಳಿಗೆ ಹೇಳಿದರು.
ಪಾಲಿಕೆ‌ ಮೇಯರ್ ವೀಣಾ ಬರದ್ವಾಡ ಹಾಗೂ ಹಿರಿಯ ಸದಸ್ಯ ವೀರಣ್ಣ ಸವಡಿ, ಸಚಿವ ಲಾಡ್ ಅವರಿಗೆ ಮನವರಿಕೆ ಮಾಡಲು ಯತ್ನಿಸಿದರು. ಆದರೆ, ಲಾಡ್ ಶಂಕುಸ್ಥಾಪನೆ ನೆರವೇರಿಸದೇ ಕಾರ್ ಏರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net