ಮುನಿಗಳಿಗೆ ಸೂಕ್ತ ಭದ್ರತೆ ಒದಗಿಸಲಿ

web2
ಹಿರೇಕೋಡಿ ಗ್ರಾಮದ ನಂದಿ ಪರ್ವತದ ಕಾಮಕುಮಾರ ನಂದಿ ಮಹಾರಾಜರ ಆಶ್ರಮಕ್ಕೆ ವಿಎಚ್‌ಪಿ ರಾಜ್ಯ ಪ್ರಮುಖರ ತಂಡ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿತು. ಬಸವರಾಜ ಜಿ., ವೆಂಕಟೇಶ ದೇಶಪಾಂಡೆ ಜಿ., ವಿಠ್ಠಲ ಜಿ., ವಿನಾಯಕ ಮಾಳಿ ಇತರರಿದ್ದರು.
Published on

ಚಿಕ್ಕೋಡಿ: ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಆಶ್ರಮಕ್ಕೆ ವಿಶ್ವ ಹಿಂದು ಪರಿಷತ್ ರಾಜ್ಯ ಪ್ರಮುಖರ ತಂಡ ಭೇಟಿ ನೀಡಿದೆ. ನಂದಿ ಮಹಾರಾಜರ ಹತ್ಯೆ ವಿಶ್ವ ಹಿಂದು ಪರಿಷತ್, ಬಜರಂಗದಳದ ವತಿಯಿಂದ ಖಂಡಿಸಿ ಈಚೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಎಚ್‌ಪಿ ಮುಖಂಡ ಬಸವರಾಜ ದೇಶಪಾಂಡೆ ಮಾತನಾಡಿ, ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ಮಹಾರಾಜರ ಸಾವಿಗೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಸರ್ಕಾರ ಮುನಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ವಿಎಚ್‌ಪಿ ಮುಖಂಡರಾದ ವಿಠ್ಠಲ ಜಿ, ವಿನಾಯಕ ಮಾಳಿ, ಶಿವಪುತ್ರ ಜತ್ತಿ, ಮಹೇಶ ರದ್ದಿ, ಮಂಜು ರದ್ದಿ, ಕಿರಣ ನೇಸರ್ಗಿ, ಮಂಜು ಕುರಬೆಟ್ಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net