ಮುನವಳ್ಳಿ ಮುರುಘೇಂದ್ರ ಶ್ರೀ ಸೇವೆ ಅಪಾರ

4
ಮುನವಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮುರುಂದ್ರ ಸ್ವಾಮೀಜಿ ಜನ್ಮದಿನದ ನಿಮಿತ್ತ ಬಡವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ನೋಟಬುಕ್​ ಹಾಗೂ ಕಂಪಾಸ್​ ವಿತರಿಸಲಾಯಿತು. ನೀಲಕಂಠ ಸ್ವಾಮೀಜಿ, ಮುರುಂದ್ರ ಶ್ರೀಗಳು, ಮಲ್ಲಿಕಾರ್ಜುನ ಶಿವಾಚಾರ್ಯರು, ಶಂಕರರಾಜೇಂದ್ರ ಸ್ವಾಮೀಜಿ ಇತರರಿದ್ದರು.
Published on

ಮುನವಳ್ಳಿ: ಮುರುಘೇಂದ್ರ ಶ್ರೀಗಳು ಅತ್ಯಂತ ಕಡಿಮೆ ಅವ-ಧಿಯಲ್ಲಿ ಧಾರ್ಮಿಕ, ಶೈಣಿಕ ಹಾಗೂ ಸಾಮಾಜಿಕವಾಗಿ ಶ್ರೀಮಠವನ್ನು ಬೆಳೆಸಿ ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ ಎಂದು ಮುರಗೋಡದ ನೀಲಕಂಠ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಅನ್ನದಾನೇಶ್ವರ ಎರೆಹುಳು ಗೊಬ್ಬರ ಉತ್ಪಾದನಾ ಟಕ, ಸಿದ್ಧಗಿರಿ ಸಾವಯವ ನೈಸರ್ಗಿಕ ಕೃಷಿ ಬಳಗ, ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೋಮಶೇಖರಮಠದ ಮುರುಂದ್ರ ಸ್ವಾಮೀಜಿಗಳ 50ನೇ ಜನ್ಮದಿನ, ರೈತರಿಗೆ ಉಚಿತ ಎರೆಜಲ, ಗೋಕೃಪಾಮತ ವಿತರಣೆ, ಬಡ ಮಕ್ಕಳಿಗೆ ಶಾಲಾ ಶುಲ್ಕ ಹಾಗೂ ನೋಟಬುಕ್​, ಕಂಪಾಸ್​ ವಿತರಣೆ ಮತ್ತು ಹೆಸ್ಕಾಂ ನೌಕರರು, ಕರೆಮ್ಮದೇವಿ ದೇವಸ್ಥಾನ ಕಮಿಟಿ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮುರುಂದ್ರ ಶ್ರೀಗಳು ಮಾತನಾಡಿ, ಶ್ರೀಮಠವು ಆಧ್ಯಾತ್ಮಿಕ, ಶೆಣಿಕ, ಸಾಮಾಜಿಕ ಹಾಗೂ ಸಾಂಸತಿಕವಾಗಿ ಬೆಳೆಯಲು ಹಾನಗಲ್​ ಕುಮಾರೇಶ್ವರರು ನಮಗೆ ಪ್ರೇರಕಶಕ್ತಿ. ಭಕ್ತರೇ ಶ್ರೀಮಠದ ಶಕ್ತಿ ಎಂದರು.

ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಅಮಿನಗಡದ ಶಂಕರರಾಜೇಂದ್ರ ಸ್ವಾಮೀಜಿ, ಅಂಕಲಗಿಯ ಅಮರಸಿದ್ದೇಶ್ವರ ಸ್ವಾಮೀಜಿ, ಚಿಕ್ಕಲಪರ್ವಿಯ ಸದಾಶಿವ ಸ್ವಾಮೀಜಿ ಮಾತನಾಡಿದರು. ಮುರುಘೇಂದ್ರ ಶ್ರೀಗಳಿಗೆ ನಾಣ್ಯಗಳ ತುಲಾಭಾರ ಜರುಗಿತು. ಮುರುರಾಜೇಂದ್ರ ಯೋಗ ವಿದ್ಯಾ ಕೇಂದ್ರದ ಅಂಗ ಸಂಸ್ಥೆಗಳು, ಸಹಜ ಸ್ಥಿತಿಯೋಗದ ಸತ್ಸಂಗ ಬಳಗ, ಜಂಗಮ ಸಮಾಜ, ಕಲಾ ಬಳಗ, ಅಕ್ಕನ ಬಳಗ, ವಿವಿಧ ಸಂ&ಸಂಸ್ಥೆಗಳು ಹಾಗೂ ಸದ್ಭಕ್ತರು ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು.

ಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ಸವದತ್ತಿಯ ಶಿವಾನಂದ ಸ್ವಾಮೀಜಿ, ತಾರಿಹಾಳದ ಅಡವೀಶದೇವರು, ಜಂಬಗಿ ಅಡವಿ ಸಿದ್ದೇಶ್ವರ ಶ್ರೀಗಳು, ವಿರೂಪಾ ಸ್ವಾಮೀಜಿ, ಶಾಸಕ ವಿಶ್ವಾಸ ವೆದ್ಯ, ವಿರೂಪಾ ಮಾಮನಿ, ರವೀಂದ್ರ ಯಲಿಗಾರ, ನಿಂಗನಗೌಡ ಮಲಗೌಡ್ರ, ವಿ.ಎಸ್​.ಯಕ್ಕುಂಡಿ, ಚಂದ್ರು ಜಂಬ್ರಿ, ಗಂಗಾಧರ ಗೊರಾಬಾಳ, ಮಂಜುನಾಥ ಭಂಡಾರಿ, ಅರುಣಗೌಡ ಪಾಟೀಲ, ಶಂಕರ ಗಯ್ಯಾಳಿ, ಟಿ.ಪಿ.ಮನೋಳಿ, ಈರಣ್ಣ ಸಂಕಣ್ಣವರ, ಜಗದೀಶ ಹಿರೇಮಠ, ಎಂ.ಎಚ್​.ಪಾಟೀಲ, ಕೆ.ಬಿ.ನಲವಡೆ, ಬಿ.ಬಿ.ಹುಲಿಗೊಪ್ಪ, ಶ್ರೀಶೆಲ ಗೋಪಶೆಟ್ಟಿ, ಸುಭಾಸ ಗೀದಿಗೌಡ್ರ, ಈಶ್ವರ ಕರೀಕಟ್ಟಿ. ಕಲ್ಲಪ್ಪ ನಲವಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net