ಮುದ್ರಾದಡಿ 10 ಲಕ್ಷ ರೂ.ಸಾಲದ ಅವಕಾಶ

29ydg01
Published on

ಯಾದಗಿರಿ: ಕೇಂದ್ರ ಸರಕಾರ ಯುವಕರಿಗೆ ಉದ್ಯೋಗ ಸೃಷ್ಟಿಸಲು ಹಲವು ಯೋಜನೆಗಳನ್ನು ಜಾರಿ ತರುತ್ತಿದ್ದು, ವಿಶ್ವಕರ್ಮ ಯೋಜನೆಯೂ ಸಹ ಮಹತ್ವಾಕಾಂಕ್ಷಿಯಾಗಿದೆ ಎಂದು ಮಾಜಿ ಸಚಿವ ಕೆ.ರಾಮದಾಸ್ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ, ಹಾಗೂ ಪಿಎಂ ಸ್ವನಿಧಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಪಿಎಂ ಸ್ವನಿಧಿ ಕೇವಲ ಒಂದು ಯೋಜನೆಯಾಗಿ ಜಾರಿಯಾಗುತ್ತಿಲ್ಲ. ಬದಲಾಗಿ ವೃತ್ತಿಪರರು, ಬೀದಿಬದಿ ವ್ಯಾಪಾರಿಗಳು, ಪೇಪರ್ ಹಾಕುವವರು ಇದರ ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಆರಂಭಿಕ 20 ಸಾವಿರ ಸಾಲ, ನಂತರ 40, 50 ಸಾವಿರ ಬಳಿಕ 10 ಲಕ್ಷ ರೂ.ವರೆಗೂ ಮುದ್ರಾದಡಿ ಸಾಲ ನೀಡಲಾಗುತ್ತದೆ. ವ್ಯಕ್ತಿ ಮೃತಪಟ್ಟರೆ 22 ಲಕ್ಷ ರೂ.ಪರಿಹಾರ ಕೊಡಲು ಅವಕಾಶವಿದೆ ಎಂದು ವಿವರಿಸಿದರು.

ಪಿಎಂ ವಿಶ್ವಕರ್ಮ ಯೋಜನೆ ಜಿಲ್ಲಾ ಸಂಚಾಲಕ ವೆಂಕಟರಡ್ಡಿ ಅಬ್ಬೆತುಮಕೂರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬಡವರಿಗಾಗಿ ಇಂಥ ಮಹತ್ಮಾಕಾಂಕ್ಷಿ ಯೋಜನೆ ಜಾರಿಗೊಳಿಸಿದ್ದು, ಆಥರ್ಿಕ ದುರ್ಬಲ ವರ್ಗದ ಬದುಕು ಹಸನಾಗಲಿದೆ. ರಾಜ್ಯದ ಅಭಿವೃದ್ಧಿ ಮತ್ತು ಜನರು ಸ್ವಯಂ ಪ್ರೇರಿತವಾಗಿ ಮೇಲೆ ಬರುವುದು ಕಾಂಗ್ರೆಸ್ಸಿಗೆ ಬೇಕಾಗಿಲ್ಲ. ಅವರನ್ನು ಬಡವರಾಗಿಯೇ ಉಳಿಸುವುದೇ ಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net