

ಕಲಬುರಗಿ: ಎರಡನೇ ಹಂತದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 27ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮತಪತ್ರ ಮುದ್ರಣ ನಡೆಯುತ್ತಿರುವ ನಗರದ ವಿವಿಧ ಮುದ್ರಣಾಲಯಕ್ಕೆ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಬುಧವಾರ ಭೇಟಿ ನೀಡಿದರು.
ಮೊದಲ ಹಂತದ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಿಸಡಕ್ ಮತಗಟ್ಟೆ ಸಂ-7ರಲ್ಲಿ ಮತಪತ್ರದಲ್ಲಿ ಅಭ್ಯಥರ್ಿಯೋರ್ವರ ಚಿಹ್ನೆ ತಪ್ಪಾಗಿ ಮುದ್ರಿತವಾಗಿ ಮತದಾನ ಸ್ಥಗಿತಗೊಂಡಿದ್ದು, ಮರು ಮತದಾನ ಮಾಡುವಂತೆ ಚುನಾವಣಾ ಆಯೋಗ ಆದೇಶಿಸಿರುವ ಹಿನ್ನೆಲೆಯಲ್ಲಿ ಇಂತಹ ತಪ್ಪುಗಳು ಮರು ಕಳುಹಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಜ್ಯೋತ್ಸ್ನಾ ಸೂಚಿಸಿದರು.
ಚಿತ್ತಾಪುರ ತಹಸೀಲ್ದಾರ್ ಉಮಾಕಾಂತ ಹಾಗೂ ಜೇವಗರ್ಿ ತಹಸೀಲ್ದಾರ್ ಸಿದ್ಧರಾಯ ಭಾಸಗಿ ಇದ್ದರು.