ಮುದ್ದಹನುಮೇಗೌಡ ಕಾಂಗ್ರೆಸ್​ಗೆ ಸದ್ಯದಲ್ಲೇ ಗುಡ್​ ಬೈ?

Published on

ತುಮಕೂರು: ಹಾಲಿ ಸದಸ್ಯನಾಗಿದ್ದರೂ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್​ ಸಿಗದೆ ಕಾಂಗ್ರೆಸ್​ ಜತೆ ಮುನಿಸಿಕೊಂಡಿರುವ ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ ಕಾಂಗ್ರೆಸ್​ಗೆ ಗುಡ್​ಬೈ ಹೇಳುವುದು ಬಹುತೇಕ ಖಚಿತವಾಗಿದೆ.

ಜಿಲ್ಲೆಯ ಪ್ರಭಾವಿ ಒಕ್ಕಲಿಗ ಮುಖಂಡರಾಗಿರುವ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಇದ್ದ ಕಡೆಯ ಅವಕಾಶವನ್ನು ಕಾಂಗ್ರೆಸ್​ ಬಳಸಿಕೊಳ್ಳದಿರುವ ಹಿನ್ನೆಲೆಯಲ್ಲಿ ಗರಂ ಆಗಿರುವ ಅವರು ಕುಣಿಗಲ್​ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಖಚಿತ ಎಂದು ಪುನರುಚ್ಚರಿಸಿದ್ದಾರೆ.

ರಾಜ್ಯಸಭೆ ಟಿಕೆಟ್​ ಕೈತಪ್ಪಿದ ಹಿನ್ನೆಲೆಯಲ್ಲಿ ತಾಲೂಕಿನ ಹೆಬ್ಬೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೈಕಮಾಂಡ್​ಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಶಕ್ತಿ ಇಲ್ಲ. ಹಾಗಾಗಿ, ನಾನು ಪರ್ಯಾಯ ಯೋಜನೆಯತ್ತ ಗಮನಹರಿಸಿದ್ದೇನೆ ಎಂದರು.

ಸ್ಥಳಿಯರನ್ನು ಕಡೆಗಣಿಸಿ ಚುನಾವಣೆಯಲ್ಲಿ ಎಂದೂ ಗೆಲ್ಲದ ಸ್ವಯಂ ೂಷಿತ ನಾಯಕರಿಗೆ ಕಾಂಗ್ರೆಸ್​ ಹೈಕಮಾಂಡ್​ ಅವಕಾಶ ಕೊಡುತ್ತಿರುವಾಗ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಿರುವ ನಮಗೇಕೆ ಅವಕಾಶ ನಿರಾಕರಿಸಲಾಗಿದೆ? ಕನಿಷ್ಠ ಕಾರಣವನ್ನಾದರೂ ಹೇಳಬೇಕಲ್ವಾ? ಎಂದು ಪ್ರಶ್ನಿಸಿದರು.

ಸಂಸತ್​ ಚುನಾವಣೆಯಲ್ಲಿ ರಾಜ್ಯದ ಉಸ್ತುವಾರಿಯಾಗಿದ್ದ ಕೆ.ಸಿ.ವೇಣುಗೋಪಾಲ್​ ಈಗ ಬೆಂಗಳೂರಿನಲ್ಲಿಯೇ ಇದ್ದಾರೆ. ಆಗ ನನಗೆ ಏನು ಭರವಸೆ ನೀಡಿದ್ದರು? ಅದರಂತೆ ಏಕೆ ನಡೆದುಕೊಳ್ಳಲಿಲ್ಲ? ಎಂಬುದನ್ನು ಅವರೇ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಮುಖಂಡರೇ ನನ್ನ ವಿರುದ್ಧ ನಡೆಸಿದ್ದ ಷಡ್ಯಂತ್ರದ ಬಗ್ಗೆ ಇತ್ತೀಚಿಗೆ ಮಾಜಿ ಪ್ರಧಾನಿ ದೇವೇಗೌಡರು ತುಮಕೂರಿನಲ್ಲಿ ಪ್ರಸ್ತಾಪಿಸಿದ್ದರು, ಈ ಬಗ್ಗೆಯೂ ಕಾಂಗ್ರೆಸ್​ ಮೌನವಾಗಿರುವುದು ಜನರಿಗೆ ಎಲ್ಲವನ್ನೂ ಆರ್ಥ ಮಾಡಿಸಿದೆ ಎಂದರು.

ನಾನು ಕುಣಿಗಲ್​ ಕ್ಷೇತ್ರದಿಂದ ಪಕ್ಷೇತರನಾಗಿಯಾದರೂ ಸರಿ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ, ಜನರು ಕೊಡುವ ತೀರ್ಪು ಸ್ವೀಕರಿಸಿ ಅದರಂತೆ ಕೆಲಸ ಮಾಡುತ್ತೇನೆ ಎಂದು ೂಷಿಸಿದರು.

ಚಿತಾವಣೆ ಮಾಡಿ ನನಗೆ ಟಿಕೆಟ್​ ತಪ್ಪಿಸಿರಬಹುದು. ಆದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್​ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ತಾಲೂಕಿನ ಜನ ಸ್ಪರ್ಧಿಸಬೇಕು ಎಂದು ಬಯಸಿದ್ದಾರೆ, ಯಾವ ಪಕ್ಷ ಎಂಬುದನ್ನು ಅವರನ್ನೇ ಕೇಳಿ ನಿರ್ಧರಿಸುತ್ತೇನೆ. > ಎಸ್​.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net