

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಸೋಮವಾರ ೧೨ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮೇರಿಯಂಡ ಮತ್ತು ಕುಟ್ಟಂಡ(ಅಮ್ಮತ್ತಿ) ನಡುವಿನ ಪಂದ್ಯದಲ್ಲಿ ಪಂದ್ಯದಲ್ಲಿ ತಲಾ ೩ ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೮-೭ ಗೋಲುಗಳ ಅಂತರದಲ್ಲಿ ಮೇರಿಯಂಡ ಗೆಲುವು ಸಾಧಿಸಿತು. ಮೇರಿಯಂಡ ಪರ ರಾಯಲ್ ಅಯ್ಯಣ್ಣ ೨ ಹಾಗೂ ಸಚಿನ್ ಸೋಮಣ್ಣ ೧ ಗೋಲು ದಾಖಲಿಸಿದರು. ಕುಟ್ಟಂಡ ಪರ ವಿಬಿನ್ ಅಯ್ಯಪ್ಪ ೨, ರಾಜಿನ್ ಬಿದ್ದಪ್ಪ ೧ ಗೋಲು ದಾಖಲಿಸಿದರು. ಕುಟ್ಟಂಡ ಪಾರ್ತ್ ಪೂಣಚ್ಚ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬೊವ್ವೇರಿಯಂಡ ಮತ್ತು ಅಜ್ಜಿನಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಬೊವ್ವೇರಿಯಂಡ ಜಯ ಸಾಧಿಸಿತು. ಬೊವ್ವೇರಿಯಂಡ ಪರ ನಿತೀನ್ ಅಪ್ಪಯ್ಯ ಹ್ಯಾಟ್ರೀಕ್ ಗೋಲು ಬಾರಿಸಿದರೆ, ಜಿತನ್ ೨ ಗೋಲು ದಾಖಲಿಸಿದರು. ಅಜ್ಜಿನಂಡ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ನೆರವಂಡ ಮತ್ತು ಬೇರೆರ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ನೆರವಂಡ ತಂಡ ಗೆಲುವು ಸಾಧಿಸಿತು. ನೆರವಂಡ ಪರ ನಾಚಪ್ಪ ಹಾಗೂ ಪ್ರಶಾಂತ್ ತಲಾ ೧ ಗೋಲು ದಾಖಲಿಸಿದರು. ಬೇರೆರ ಬೆಳ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಂಡೇಡ ಮತ್ತು ಚೆರುಮಾಡಂಡ ನಡುವಿನ ಪಂದ್ಯದಲ್ಲಿ ತಲಾ ೧ ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೫-೪ ಗೋಲುಗಳ ಅಂತರದಲ್ಲಿ ಚೆರುಮಾಡಂಡ ತಂಡ ಜಯ ಸಾಧಿಸಿತು. ಚೇರುಮಾಡಂಡ ಪರ ಗಣಪತಿ ಹಾಗೂ ಮಂಡೇಡ ಪರ ಗಿರೀಶ್ ಕಾವೇರಪ್ಪ ಗೋಲು ದಾಖಲಿಸಿದರು. ಮಂಡೇಡ ಅಚ್ಚಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮುರುವಂಡ ಮತ್ತು ಮೂಕಳಮಾಡ ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಮುರುವಂಡ ತಂಡ ಗೆಲುವು ದಾಖಲಿಸಿತು. ಮುರುವಂಡ ಪರ ಮಿಥುನ್ ಅಣ್ಣಯ್ಯ ೨ ಹಾಗೂ ಶಶಾಂಕ್ ಅಪ್ಪಣ್ಣ ೧ ಗೋಲು ಬಾರಿಸಿದರು. ಬೋಪಣ್ಣ ೧ ಗೋಲು ದಾಖಲಿಸಿದರು. ಮೂಕಳಮಾಡ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಂಡೇಪಂಡ ಮತ್ತು ಪಾಲಂದಿರ ನಡುವಿನ ಪಂದ್ಯದಲ್ಲಿ ೩-೧ ಗೋಲುಗಳ ಅಂತರದಲ್ಲಿ ಮಂಡೇಪಂಡ ತಂಡ ಜಯ ಸಾಧಿಸಿತು. ಮಂಡೇಪಂಡ ಪರ ಗೌತಮ್ ೨ ಹಾಗೂ ಕವನ್ ಮುತ್ತಪ್ಪ ೧ ಗೋಲು ದಾಖಲಿಸಿದರು. ಪಾಲಂದಿರ ಪರ ಸಂದೇಶ್ ನಾಣಯ್ಯ ೧ ಗೋಲು ಬಾರಿಸಿದರು. ಪಾಲಂದಿರ ಅಪ್ಪಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
೨ನೇ ಮೈದಾನದಲ್ಲಿ ಕುಮ್ಮಂಡ ಮತ್ತು ತಂಬುಕುತ್ತೀರ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೪-೩ ಗೋಲುಗಳ ಅಂತರದಲ್ಲಿ ಕುಮ್ಮಂಡ ತಂಡ ಗೆಲುವು ಸಾಧಿಸಿತು. ತಂಬುಕುತ್ತೀರ ರಘು ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಚೀರಂಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ಗೆಲುವು ಸಾಧಿಸಿತು. ಪುದಿಯೊಕ್ಕಡ ಪರ ಮಿಥುನ್ ಪೊನ್ನಪ್ಪ, ಸುಮನ್ ಮುತ್ತಣ್ಣ, ಬಾಗೇಶ್ ಹಾಗೂ ಪ್ರಧಾನ್ ಸೋಮಣ್ಣ ತಲಾ ೧ ಗೋಲು ದಾಖಲಿಸಿದರು. ಚೀರಂಡ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಚೆಪ್ಪುಡಿರ ಮತ್ತು ಕೈಪಟ್ಟಿರ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಚೆಪ್ಪುಡಿರ ತಂಡ ಗೆಲುವು ದಾಖಲಿಸಿತು. ಚೆಪ್ಪುಡಿರ ಪರ ನರೇನ್ ಕಾರ್ಯಪ್ಪ, ಚೇತನ್ ಚಿಣ್ಣಪ್ಪ, ಪ್ರಣಾವ್ ತಮ್ಮಯ್ಯ, ಗಗನ್ ತಿಮ್ಮಯ್ಯ ಹಾಗೂ ಸೋಮಣ್ಣ ತಲಾ ೧ ಗೋಲು ದಾಖಲಿಸಿದರು. ಕೈಪಟ್ಟಿರ ಚೆಶ್ವಿನ್ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೇವಡ ಮತ್ತು ಕರ್ತಮಾಡ ನಡುವಿನ ಪಂದ್ಯದಲ್ಲಿ ಕರ್ತಮಾಡ ತಂಡ ೪-೦ ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕರ್ತಮಾಡ ಪರ ಲವರಾಜ್, ಅಯ್ಯಪ್ಪ, ಲಿತೇಶ್ ಹಾಗೂ ಬೆಳ್ಯಪ್ಪ ತಲಾ ೧ ಗೋಲು ದಾಖಲಿಸಿದರು. ಮೇವಡ ಜಶಾಂತ್ ತಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಚಿಂಡಮಾಡ ಮತ್ತು ಅಟ್ರಂಗಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಅಟ್ರಂಗಡ ತಂಡ ಗೆಲುವು ದಾಖಲಿಸಿತು. ಅಟ್ರಂಗಡ ಪರ ನರ್ತನ್ ನಾಚಪ್ಪ ಹಾಗೂ ನಿತಿನ್ ಕುಟ್ಟಪ್ಪ ತಲಾ ೧ ಗೋಲು ದಾಖಲಿಸಿದರು. ಚಿಂಡಮಾಡ ಪಡ ತೀರ್ಥನ್ ೧ ಗೋಲು ಬಾರಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಳವಂಡ ಮತ್ತು ಅರೆಯಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಮಳವಂಡ ತಂಡ ಜಯ ಸಾಧಿಸಿತು. ಮಳವಂಡ ಪರ ತಕ್ಷಕ್ ಬಿದ್ದಪ್ಪ ಹಾಗೂ ಅದೀತ್ ಮುತ್ತಣ್ಣ ತಲಾ ೧ ಗೋಲು ದಾಖಲಿಸಿದರು. ಅರೆಯಡ ಶರವಣ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮೈದಾನ-೧
ಬೆಳಿಗ್ಗೆ ೧೦ ಗಂಟೆಗೆ ಚೆರುವಾಳಂಡ ಮತ್ತು ಸಣ್ಣುವಂಡ, ೧೧ ಗಂಟೆಗೆ ಸೋಮೆಯಂಡ ಮತ್ತು ಅಲ್ಲಾರಂಡ, ಮಧ್ಯಾಹ್ನ ೧ ಗಂಟೆಗೆ ಓಡಿಯಂಡ ಮತ್ತು ಕಲಿಯಂಡ, ೨ ಗಂಟೆಗೆ ಕರಿನೆರವಂಡ ಮತ್ತು ಕರವಂಡ, ೩ ಗಂಟೆಗೆ ಬಯವಂಡ ಮತ್ತು ಮುಕ್ಕಾಟಿರ(ಹರಿಹರ) ಕುಟುಂಬಗಳ ನಡುವೆ ಸೆಣಸಾಟ ನಡೆಯಲಿದೆ.
ಮೈದಾನ-೨
ಬೆಳಿಗ್ಗೆ ೯ ಗಂಟೆಗೆ ಕಾಯಪಂಡ ಮತ್ತು ಮಾಳೇಟಿರ (ಕೂಕ್ಲುರು), ೧೧ ಗಂಟೆಗೆ ನಂಬುಡುಮಾಡ ಮತ್ತು ಚೊಟ್ಟೆಯಂಡಮಾಡ, ಮಧ್ಯಾಹ್ನ ೧ ಗಂಟೆಗೆ ಅಯ್ಯನೆರವಂಡ ಮತ್ತು ಅಂಜಪರವಂಡ, ೨ ಗಂಟೆಗೆ ಬಲ್ಲಚಂಡ ಮತ್ತು ಮೇಕೇರಿರ ಕುಟುಂಬಗಳ ನಡುವೆ ಸೆಣಸಾಟ ನಡೆಯಲಿದೆ.