

ಮುದಗಲ್: ಕಾರ್ತಿಕ ಮಾಸದ ದ್ವಾದಶಿ ಹಿನ್ನೆಲೆಯಲ್ಲಿ ಪಟ್ಟಣದ ಮನೆಗಳಲ್ಲಿ ಬುಧವಾರ ತುಳಸಿ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಿಲ್ಲಾ, ದೇಶಪಾಂಡೆ ಗಲ್ಲಿ ಸೇರಿದಂತೆ ವಿವಿಧೆಡೆ ಮನೆಯಲ್ಲಿನ ತುಳಸಿ ಗಿಡಕ್ಕೆ ಅಲಂಕಾರ ಮಾಡಿ ಸಾಂಪ್ರದಾಯಿಕವಾಗಿ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು. ಮಂಗಳಾಷ್ಟಕದ ಮೂಲಕ ಅಕ್ಷತೆ ಹಾಕಿ ಭಕ್ತಿ ಸಮರ್ಪಿಸಲಾಯಿತು. ಬೆಳಗ್ಗೆಯಿಂದ ತುಳಸಿ ಗಿಡಕ್ಕೆ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಅನ್ನ ಪ್ರಸಾದದ ನೈವೇದ್ಯ ಸಮರ್ಪಿಸಲಾಯಿತು.
ಸಾಯಂಕಾಲ ತುಳಸಿ ಕಟ್ಟೆಯನ್ನು ದೀಪಾಲಂಕಾರದ ಮೂಲಕ ವಿವಿಧ ವಸ್ತುಗಳಿಂದ ಅಲಂಕರಿಸಿ ಡೊಗ್ಗಾಲ ಕೃಷ್ಣನ ಉತ್ಸವ ಮೂರ್ತಿಯಿಟ್ಟು ವಿವಾಹ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.