ಮುತ್ಯಾನ ಬಬಲಾದದಲ್ಲಿ ಚಿರತೆ ಪ್ರತ್ಯಕ್ಷ

klb chirathe1 (1)
Published on

ಕಮಲಾಪುರ: ಕುರಿಕೋಟಾಕ್ಕೆ ಸಮೀಪದ ಮುತ್ಯಾನ ಬಬಲಾದನ ಕಬ್ಬಿನ ತೋಟದಲ್ಲಿ ಚಿರತೆಯೊಂದು ಪತ್ತೆಯಾಗಿದೆ. ದಾರಿ ತಪ್ಪಿ ಇದು ಬಂದಿರಬೇಕೆಂದು ಭಾವಿಸಲಾಗಿದ್ದು, ಇದನ್ನು ಹಿಡಿಯಲು ಅರಣ್ಯ ಇಲಾಖೆ ಕ್ರಮಗಳನ್ನು ಕೈಕೊಂಡಿದೆ. ಎಲ್ಲಿಂದ ಚಿರತೆ ಬಂದಿತು ಎನ್ನುವುದೇ ನಿಗೂಢವಾಗಿದೆ.
ಗ್ರಾಮದ ಕಬ್ಬಿನ ತೋಟಕ್ಕೆ ಚಿರತೆ ಬಂದಿರುವುದನ್ನು ಅರಿತ ಗ್ರಾಮಸ್ಥರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ತಕ್ಷಣವೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಚಿರತೆ ಗಮನಿಸಿದ್ದಾರೆ. ಚಿರತೆ ತೋಟದಲ್ಲಿ ಅವಿತುಕೊಂಡು ಕುಳಿತಿದ್ದು, ಇದನ್ನು ವಿಡಿಯೋ ಮಾಡಲಾಗಿದೆ.
ಚಿರತೆ ಹಿಡಿಯಲು ಅಗತ್ಯವಾಗಿರುವ ಬೋನು ಕಲಬುರಗಿಯ ಅರಣ್ಯ ಇಲಾಖೆಯಲ್ಲಿ ಇಲ್ಲವೆನ್ನಲಾಗಿದೆ. ಜೇವಗರ್ಿಯಲ್ಲಿ ಬೋನ್ ಇದ್ದು ಅಲ್ಲಿಂದ ಮುತ್ಯಾನ ಬಬಲಾದ ತೋಟಕ್ಕೆ ಬೋನು ತರಿಸಲಾಗುತ್ತಿದೆ. ಬೋನು ಬಂದ ತಕ್ಷಣವೇ ಚಿರತೆ ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಚಿರತೆ ಅವಿತುಕೊಂಡಿರುವ ಗ್ರಾಮಕ್ಕೆ ಕಮಲಾಪುರ ತಹಸೀಲ್ದಾರ್ಅಂಜುಮ್ ತಬಸ್ಸುಮ್, ಸರ್ಕಲ್ ಇನ್ಸ್ಸ್ಪೆಕ್ಟರ್ ರಾಘವೇಂದ್ರ ಭಜಂತ್ರಿ, ಪಿಎಸ್ಐ ಹುಸೇನ್ ಬಾಷಾ, ಮಹಾಗಾಂವ್ ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್ ವಿಕಾಸ ಸಜ್ಜನ್, ಅರಣ್ಯ ಇಲಾಖೆಯ ಎಸಿಎಫ್ ಬಾಬುರಾವ್ ಚವ್ಹಾಣ, ಫಾರೆಸ್ಟ್ ರೆಂಜ್ ಆಫೀಸರ್ ಸುನೀಲ್ ಚವ್ಹಾಣ, ಕಲಬುರಗಿ ಝೋನ್ ಆಫೀಸರ್ ಭೀಮರಾಯ, ಚಿತ್ತಾಪುರದ ವಿಜಯಕುಮಾರ ಅವರು ಆಗಮಿಸಿದ್ದಾರೆ.
ಚಿರತೆ ಅವಿತುಕೊಂಡಿರುವ ಹಿನ್ನಲೆಯಲ್ಲಿ ಗ್ರಾಮದ ಜನತೆ ಮನೆಗಳನ್ನು ಬಿಟ್ಟು ಹೊರಬರದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net