

ಹುಲಸೂರು: ಪಟ್ಟಣದ ಇಂಸಪಲ್ಲಿ ಮಾತಾ ದೇವಸ್ಥಾನ ಸೇರಿ ಹಾಲಹಳ್ಳಿ, ತೋಗಲೂರ, ಗಡಿಗೌಂಡಗಾವ, ಸೋಲದಾಬಕಾ ಸೇರಿ ವಿವಿಧ ಗ್ರಾಮಗಳ ಮುತ್ತೈದೆಯರು ಪೂಜೆ, ನೈವೈದ್ಯ, ಕಾಯಿ, ಕರ್ಪೂರ ಅರ್ಪಿಸುವ ಮೂಲಕ ವಟಸಾವಿತ್ರಿ ಹಬ್ಬ ಅದ್ದೂರಿಯಾಗಿ ಆಚರಿಸಿದರು.
ಮಹಿಳೆಯರು ತಂಡೋಪತಂಡವಾಗಿ ಆಗಮಿಸಿ ಮರಕ್ಕೆ ಪೂಜೆ ಸಲ್ಲಿಸಿ ಗ್ರಾಮಿಣ ಕಲೆಯಾದ ಫೂಲಾಯಿ ಹಾಡುಗಳಿಗೆ ಹೆಜ್ಜೆ ಹಾಕಿದರು. ಮಕ್ಕಳು ಜೋಕಾಲಿ ಆಡಿ ಸಂಭ್ರಮಿಸಿದರು. ಲಾಕ್ಡೌನ್ ಮಧ್ಯೆ ಪರಸ್ಪರ ಅಂತರ ಕಾಯ್ದುಕೊಂಡು ಹಬ್ಬ ಆಚರಿಸಿದರು. ಪಟ್ಟಣದ ಶಿವಾಜಿ ವೃತದ ದುರ್ಗಾ ಮಾತಾ ದೇವಸ್ಥಾನದಲ್ಲಿ ಮತ್ತು ಬೀದರ್-ಲಾತೂರ ಹುಲಸೂರು ಕ್ರಾಸ್ ಹತ್ತಿದರದ ಆಲದ ಮರದ ಕೆಳಗೆ ಪೂಜೆಸಿ, ದಾರದಿಂದ ಸುತ್ತು ಹಾಕಿದರು. ಮೇಹಕರ್, ಸಾಯಗಾಂವ, ಕೇಸರ ಜವಳಗಾ, ಮುಚಳಂಬ, ಗೋರ್ಟಾ ಸೇರಿ ಬಹುತೇಕ ಗ್ರಾಮಗಳಲ್ಲಿ ಮುತ್ತೈದೆಯರು ಆಲದ ಮರಕ್ಕೆ ಪೂಜೆ ಸಲ್ಲಿಸಿದರು.