ಮುತ್ತಪ್ಪ ದೇಗುಲದಲ್ಲಿ ಪುತ್ತರಿ ವೆಳ್ಳಾಟಂ

12vtp 1 muthappa Vellatam
Published on

ವಿರಾಜಪೇಟೆ: ವಿರಾಜಪೇಟೆಯ ಅರಸು ನಗರದ ಶ್ರೀ ಮುತ್ತಪ್ಪ ದೇವಸ್ಥಾನದಲ್ಲಿ ದೇವರ ಪುತ್ತರಿ ವೆಳ್ಳಾಟಂ ಮತ್ತು ಪೂಜಾ ಕಾರ್ಯವನ್ನು ಅರಸುನಗರ ನಿವಾಸಿಗಳಾದ ಜಯ ಗುರುಸ್ವಾಮಿ ಕುಟುಂಬದವರಿಂದ ನಡೆಸಲಾಯಿತು.


ದೇವಸ್ಥಾನದಲ್ಲಿ ಬೆಳಗ್ಗೆಯಿಂದ ದೇವರಿಗೆ ವಿಶೇಷ ಪೂಜೆಗಳು ನಡೆದವು. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮುತ್ತಪ್ಪನ ಪುತ್ತರಿ ವೆಳ್ಳಾಟಂ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ನಗರ ಹಾಗೂ ಇತರೆಡೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net