ಮುತ್ತತ್ತಿ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ

IMG-20220828-WA0011
ಕಡೇ ಶ್ರಾವಣ ಶನಿವಾರ ಮತ್ತು ಅಮಾವಾಸ್ಯೆ ಪ್ರಯುಕ್ತ ಹಲಗೂರು ಸಮೀಪದ ಮುತ್ತತ್ತಿರಾಯ ಸ್ವಾಮಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
Published on

ಹಲಗೂರು: ಪ್ರಸಿದ್ಧ ಪ್ರವಾಸಿಗರ ಪುಣ್ಯಕ್ಷೇತ್ರ ಮುತ್ತತ್ತಿ ಆಂಜನೇಯ ದೇವಸ್ಥಾನದಲ್ಲಿ ಕಡೇ ಶ್ರಾವಣ ಶನಿವಾರ ಹಾಗೂ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಕೈಂಕರ್ಯಗಳು ಜರಗಿದವು.


ಶನಿವಾರ ಬೆಳಗಿನ ಜಾವ ಕಾವೇರಿ ನದಿಯಿಂದ ನೀರನ್ನು ತಂದು ದೇವರ ಮೂರ್ತಿಯನ್ನು ಶುಚಿಗೊಳಿಸಿ ಅಭಿಷೇಕ ನಡೆಸಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಆವರಣದಲ್ಲಿ ಹಾಲರವಿ ಸೇವೆ, ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.


ಮಳೆ ನಡುವೆಯೂ ಭಕ್ತರು ಕಾಯಿ ಒಡೆಯುವ ಸೇವೆ, ಹುಲಿವಾಹನ ಸೇವೆ ಮತ್ತು ಇತರ ಪೂಜೆಗಳನ್ನು ಮಾಡಿದರು.


ಶಾಸಕ ಡಾ.ಕೆ.ಅನ್ನದಾನಿ ಭಾಗವಹಿಸಿದ್ದರು. ಹಲಗೂರು ಪೊಲೀಸರು ವಿಶೇಷ ಪೂಜೆ ಸಲ್ಲಿಸಿದರು. ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್, ಸಬ್‌ಇನ್ಸ್‌ಪೆಕ್ಟರ್ ರವಿಕುಮಾರ್ ಇತರರು ಇದ್ದರು. ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು. ಅರ್ಚಕ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net