ಮುಡುಕುತೊರೆಗೆ ಸುತ್ತೂರು ಪ್ರಚಾರ ರಥ

16tnpnewsfile02
Published on

ತಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರೀಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಪ್ರಚಾರ ರಥಯಾತ್ರೆಯು ತಾಲೂಕಿನ ಮುಡುಕುತೊರೆ ಶ್ರೀಕ್ಷೇತ್ರಕ್ಕೆ ಆಗಮಿಸಿತು.

ಶ್ರೀಕ್ಷೇತ್ರ ತೋಪಿನ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮತ್ತು ಕುಂದೂರು ಮಠದ ಇಮ್ಮಡಿ ಚನ್ನಬಸವ ರಾಜೇಂದ್ರ ಸ್ವಾಮೀಜಿ ರಥಯಾತ್ರೆಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ರಥವನ್ನು ಬರಮಾಡಿಕೊಂಡರು.

ತೋಪಿನ ಮಠದ ಶ್ರೀಗಳು ಮಾತನಾಡಿ, ಜಗದ್ಗುರು ಶಿವರಾತ್ರೀಶ್ವರ ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಿದರು.

ಗ್ರಾಮ ಪಂಚಾಯಿತಿ ಸದಸ್ಯ ದಕ್ಷಿಣಮೂರ್ತಿ, ಜೆಎಸ್‌ಎಸ್ ಮಂಗಳ ಮಂಟಪದ ವ್ಯವಸ್ಥಾಪಕ ಬಿ.ಎನ್.ಮಹದೇವಪ್ರಸಾದ್ ಸೇರಿದಂತೆ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net