ಮುಡಾ ನೌಕರರ ಬಡಾವಣೆ ನಿವಾಸಿಗಳ ಪ್ರತಿಭಟನೆ

1
Published on

ಮೈಸೂರು: ದಟ್ಟಗಳ್ಳಿಯ ಮುಡಾ ನೌಕರರ ಬಡಾವಣೆ ನಿವಾಸಿಗಳು ತಮ್ಮ ಮನೆಗಳ ಮುಂದೆ ಬ್ಯಾನರ್ ಕಟ್ಟುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಮೂಲಸೌಕರ್ಯಗಳಾದ ಬೀದಿದೀಪ, ಉತ್ತಮ ರಸ್ತೆ, ಒಳಚರಂಡಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಬಡಾವಣೆಯ ಪ್ರತಿ ಮನೆಯ ಮುಂದೆ ಕಾಣುವ ಬ್ಯಾನರ್‌ಗಳಲ್ಲಿ ‘ಅನಾಥವಾದ ಮುಡಾ ನೌಕರರ ಬಡಾವಣೆ’ ಎಂಬ ಬರಹ ಗಮನ ಸೆಳೆಯುತ್ತಿದೆ. ನಿವಾಸಿಗಳು ಈ ಶೀರ್ಷಿಕೆಯಡಿ ತಯಾರಿಸಿರುವ ಬ್ಯಾನರ್‌ನಲ್ಲಿ ತಮ್ಮ ಸಮಸ್ಯೆಗಳನ್ನು ಬರೆದುಕೊಂಡಿದ್ದಾರೆ.

ಈ ಬಡಾವಣೆ ಪಾಲಿಕೆ ಮತ್ತು ಮುಡಾ ಎರಡಕ್ಕೂ ಸೇರದೆ ಅನಾಥವಾಗಿದೆ. ನಿರ್ಲಕ್ಷ್ಯಕ್ಕೆ ಒಳಪಟ್ಟಿವೆ ಎಂದು ಈ ಬ್ಯಾನರ್‌ಗಳು ಹೇಳುತ್ತವೆ. ಇಲ್ಲಿ ಮೂಲಸೌಕರ್ಯಗಳಾದ ಬೀದಿ ದೀಪ, ರಸ್ತೆ, ಚರಂಡಿ ಆಗಲಿ ಇಲ್ಲ. ಆ ಕಾರಣ ನಿವಾಸಿಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಬಾರಿ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ದೂರನ್ನು ಸಲ್ಲಿಸಿದರೂ ಯಾರೂ ಈ ಸಮಸ್ಯೆಯನ್ನು ಸರಿಪಡಿಸುತ್ತಿಲ್ಲ ಎಂಬುದು ಇಲ್ಲಿಯ ನಿವಾಸಿಗಳ ಆರೋಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net