

ಸಿದ್ದಾಪುರ: ತಾಲೂಕಿನ ಮುಠ್ಠಳ್ಳಿಯಲ್ಲಿ ಅಳಿವಿನಂಚಿನಲ್ಲಿರುವ ಕಾಡುಪಾಪ ಒಂದು ಶನಿವಾರ ಸಂಜೆ ಕಾಣಿಸಿಕೊಂಡು ಜನರನ್ನು ಆಶ್ಚರ್ಯಗೊಳಿಸಿದೆ. ಪಶ್ಚಿಮಘಟ್ಟದ ದಟ್ಟ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಈ ಕಾಡು ಪಾಪ ಇಲ್ಲಿ ಹೇಗೆ ಎಲ್ಲಿಂದ ಬಂತು ಎನ್ನುವುದರ ಬಗ್ಗೆ ಜನರು ಆಡಿಕೊಂಡು ಚಕಿತರಾಗಿ ನೋಡಿದರು. ಕೆಲವರು ಇದನ್ನು ಎತ್ತಿಕೊಂಡು ಸಂಭ್ರಮಿಸಿದರು. ನಂತರ ಈ ಕಾಡುಪಾಪವನ್ನು ಸ್ಥಳೀಯರು ಅರಣ್ಯಕ್ಕೆ ಬಿಟ್ಟರು.
ಮುಠ್ಠಳ್ಳಿ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಆಗಾಗ ಕಾಡುಪಾಪ ಪ್ರಾಣಿ ಕಾಣಿಸಿಕೊಳ್ಳುತ್ತಿದೆ. ಹೆಚ್ಚಾಗಿ ಇವು ಮರದ ಮೇಲೆಯೇ ಇರುತ್ತದೆ ಎಂದು ಸ್ಥಳೀಯ ಹಿರಿಯರು ಹೇಳುತ್ತಾರೆ.