ಮುಚಖಂಡಿ ವೀರಭದ್ರೇಶ್ವರ ಅಗ್ಗಿ ಉತ್ಸವ ಸಂಭ್ರಮ

bkt-27-6
Published on

ಬಾಗಲಕೋಟೆ: ಶ್ರಾವಣ ಮಾಸದ ಪ್ರಯುಕ್ತ ತಾಲ್ಲೂಕಿನ ಸುಕ್ಷೇತ್ರ ಮುಚಖಂಡಿ ವೀರಭದ್ರೇಶ್ವರ ಅಗ್ಗಿ ಉತ್ಸವ ಸಂಭ್ರಮದಿಂದ ಜರುಗಿತು.
ಅಗ್ಗಿ ಉತ್ಸವಕ್ಕೂ ಮುಂಚೆ ಸಂಜೆ ಗ್ರಾಮದ‌ ಮಹಿಳೆಯರ ಆರುತಿ, ಬಾಜಾ ಭಜಂತ್ರಿ, ನಂದಿಕೋಲ, ಕುದರೆ ಮೆರವಣಿಗೆಯೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಚಿಕ್ಕ ರಥೋತ್ಸವ ನಡೆಯಿತು.‌

ಥೋತ್ಸವ ದೇವಸ್ಥಾನದಿಂದ ಆರಂಭಗೊಂಡು ಗ್ರಾಮದ ಅಗಸಿ‌ ಬಾಗಿಲವರೆಗೆ ಜರುಗಿತು.‌ರಥೋತ್ಸವ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಭಕ್ತರು ಚುರುಮುರಿ, ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿಯನ್ನು ಸಮರ್ಪಿಸಿದರು.

ಜಾತ್ರೆಗೆ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದ ವಿವಿಧ ಭಾಗದಿಂದ ಭಕ್ತರು ಆಗಮಿಸಿ‌ ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳಲು ವೀರಭದ್ರನಿಗೆ ಭಕ್ತಿಯಿಂದ ಕೈ ಮುಗಿದು ಬೇಡಿಕೊಂಡರು.ಜಾತ್ರೆಯಲ್ಲಿ ಮಕ್ಕಳ ಮನರಂಜನಾ ಸಾಮಾಗ್ರಿಗಳು ಗಮನಸೆಳೆದವು.‌ಜಾತ್ರೆಗೆ ಬಂದವರು ಚುರುಮುರಿ, ಬಜೆ ,‌ಕಾರಾ ಸೇವಿಸಿ ಸಂಭ್ರಮದಿಂದ ಜಾತ್ರೆ ಮಾಡಿದರು.

ಬೆಳಗ್ಗೆ ಯಿಂದ ಸಾಯಂಕಾಲದವರೆಗೆ ದೇವಸ್ಥಾನದಲ್ಲಿ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು. ಜಾತ್ರೆಯ ಹಿನ್ನಲೆಯಲ್ಲಿ ನಸುಕಿನ ಜಾವ ವೀರಭದ್ರೇಶ್ವರನಿಗೆ ರುದ್ರಾಭಿಷೇಕ,, ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು ಎಂದು ವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪ್ರಭುಸ್ವಾಮಿ ಸರಗಣಾಚಾರಿ ತಿಳಿಸುತ್ತಾರೆ.

ಅಗ್ಗಿ ಉತ್ಸವ ಹಾಗೂ ಚಿಕ್ಕ ರಥೋತ್ಸವ ಅಚ್ಚುಕಟ್ಟಾಗಿ ನರವೇರಲು ಮುಚಖಂಡಿ ವೀರಭದ್ರೇಶ್ವರ ಜೀರ್ಣೋದ್ದಾರ ಕಮೀಟಿಯವರು, ಮುಚಖಂಡಿ‌ ಗ್ರಾಮದ‌ ಹಿರಿಯರು,ಯುವಕರು, ಪೊಲೀಸ್ ಇಲಾಖೆಯವರ ಹಾಗೂ ಭಕ್ತರ ಸಹಕಾರ ಕಾರಣ ಎಂದು ಮುಚಖಂಡಿ ವೀರಭದ್ರೇಶ್ವರ ಜೀರ್ಣೋದ್ದಾರ ಕಮೀಟಿ‌ಅಧ್ಯಕ್ಷ ಗುರುಬಸವ ಸೂಳಿಭಾವಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net