ಮುಗುಳುವಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಂ.ಎಸ್. ನಿರಂಜನ್ ಆಯ್ಕೆ

16 ckm 3
ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎಸ್.ನಿರAಜನ್ ಹಾಗೂ ಉಪಾಧ್ಯಕ್ಷ ಬಲರಾಮ್ ಅವರನ್ನು ಬಿಜೆಪಿ ಮುಖಂಡರು ಹಾಗೂ ಸಹಕಾರಿ ಸಂಘದ ನಿರ್ದೇಶಕರು ಅಭಿನಂದಿಸಿದರು. ಎಚ್.ಸಿ.ಕಲ್ಮರುಡಪ್ಪ, ಬಸವರಾಜು, ಪರಮೇಶ್ವರಪ್ಪ, ದಿನೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತಾಲೂಕಿನ ಮುಗುಳುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂ.ಎಸ್.ನಿರAಜನ್ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಹಾಗೂ ಬಲರಾಮ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಈ ಇಬ್ಬರನ್ನು ಬಿಟ್ಟು ಬೇರೆ ಯಾರೂ ಉಮೇದುವಾರಿಕೆ ಸಲ್ಲಿಕೆ ಮಾಡದ ಕಾರಣ ಚುನಾವಣಾಧಿಕಾರಿ ಜಿ.ಪಿ.ಸುಮಾ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಸಹಕಾರಿ ಕ್ಷೇತ್ರದಲ್ಲಿ ಸರ್ವರನ್ನೂ ಒಗ್ಗೂಡಿಸುವ ಕೆಲಸ ಅದು ಕೃಷಿಪತ್ತಿನಲ್ಲಿದೆ. ಇದನ್ನು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಶ್ರಮಿಸುತ್ತಿರುವ ಎಂ.ಎಸ್.ನಿರAಜನ್ ಅವರು ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಈ ತಂಡ ರೈತರಿಗೆ ಅನುಕೂಲ ಮಾಡುವ ಉz್ದೆÃಶ ಹೊಂದಿದೆ ಎಂದರು.

ಪತ್ತಿನ ಸಹಕಾರ ಸಂಘದಲ್ಲಿ ನಂಬಿಕೆ ಬಹಳ ಮುಖ್ಯವಾಗಿದೆ. ಸಂಘದ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳ ಜನರ ನಂಬಿಕೆಯನ್ನು ಈ ತಂಡ ಉಳಿಸಿಕೊಂಡಿದೆ. ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮುಗುಳುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅತೀ ಹೆಚ್ಚು ರೈತರು ತರಕಾರಿ ಬೆಳೆಯುತ್ತಿದ್ದಾರೆ. ಅವರ ಮನವೊಲಿಸಿ ನಿಶ್ಚಿತ ಠೇವಣಿ ಸಂಗ್ರಹಿಸುವ ಮೂಲಕ ಈ ಪತ್ತಿನ ಸಹಕಾರ ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸೋಮಣ್ಣ ಮಾತನಾಡಿ, ಎಂ.ಎಸ್. ನಿರಂಜನ್ ಅವರು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಸಾಕಷ್ಟು ರೈತರಿಗೆ ಸಾಲಸೌಲಭ್ಯ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಮುಗುಳುವಳ್ಳಿ ಪತ್ತಿನ ಸಹಕಾರ ಸಂಘದಲ್ಲಿಯೂ ಅತೀ ಹೆಚ್ಚು ರೈತರು ಸಾಲಸೌಲಭ್ಯ ಪಡೆಯಲು ಕಾರಣೀಭೂತರಾಗಿದ್ದಾರೆ ಎಂದು ಶ್ಲಾಘಿಸಿದರು.

ನೂತನ ಅಧ್ಯಕ್ಷ ಎಂ.ಎಸ್. ನಿರಂಜನ್ ಮಾತನಾಡಿ, ಗುಡಿಯಲ್ಲಿ ಒಂದು ಮೂರ್ತಿ ಸಿದ್ದವಾಗಬೇಕಾದರೆ ಸಾವಿರಾರು ಉಳಿಪೆಟ್ಟು ತಿಂದಾಗ ಮಾತ್ರ ಸುಂದರ ಮೂರ್ತಿಯಾಗಿ ಪೂಜೆಗೆ ಪಾತ್ರರಾಗುವಂತೆ ನನ್ನನ್ನು ಇಂದು ನಾಲ್ಕನೇ ಬಾರಿಗೆ ಅವಿರೋಧ ಆಯ್ಕೆ ಮಾಡಿರುವ ಎಲ್ಲಾ ಸಹಕಾರಿ ಬಂಧುಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಹಿರಿಯರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯನ್ನು ಮಾಡುತ್ತಿz್ದÉÃನೆ. ಸದಾ ನನ್ನೊಂದಿಗೆ ಇದ್ದು, ಹಗಲಿರುಳು ಜನರ ಸೇವೆಗಾಗಿ ನನ್ನ ತಂಡ ಶ್ರಮಿಸುತ್ತಿದೆ. ಅಧಿಕಾರ ಶಾಶ್ವತವಲ್ಲ, ಸಿಕ್ಕಿರುವ ಅಧಿಕಾರವಧಿಯಲ್ಲಿ ಮಾಡಿದ ಕೆಲಸ ಜನಮಾನಸದಲ್ಲಿ ಉಳಿಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಸವರಾಜು, ಪರಮೇಶ್ವರಪ್ಪ, ಉಪಾಧ್ಯಕ್ಷರಾದ ಬಲರಾಮ, ಬಿಜೆಪಿ ಮುಖಂಡರಾದ ದಿನೇಶ್, ರಘುನಂದನ, ಶಿವಣ್ಣ, ಉಮೇಶ್, ಸಿಇಓ ಶಿವಕುಮಾರ್, ನಿರ್ದೇಶಕರಾದ ನಳಿನಾಕ್ಷಿ ಧರ್ಮರಾಜು, ರವಿ, ಧರ್ಮಯ್ಯ, ಪ್ರದೀಪ್ ಕುಮಾರ, ಎಂ.ಜೆ.ನವೀನ, ಎಂ.ಸಿ.ರಮೇಶ್, ಸಿದ್ಧಮ್ಮ, ಗಂಗಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net