ಮುಗಿಯದ ರಂಗಮoದಿರ ಕಾಮಗಾರಿ

19 ydg 04
Published on

ಯಾದಗಿರಿ: ಗಿರಿಜಿಲ್ಲೆ ಕೇಂದ್ರ ಸ್ಥಾನದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ರಂಗಮAದಿರ ಕೆಲ ವರ್ಷಗಳಿಂದ ಮೇಲಕ್ಕೆ ಏಳುತ್ತಲೇ ಇಲ್ಲ. ೨೦೧೧ರಲ್ಲಿ ಮಂಜೂರಾತಿ ಸಿಕ್ಕಿದ್ದು, ಮುಂಚೆ ನಗರದ ಗ್ರಾಮೀಣ ಪೊಲೀಸ್ ಹಿಂದಿನ ಜಾಗದಲ್ಲಿ ಕಟ್ಟಲು ಶುರು ಮಾಡಿ, ಬೆಸ್‌ಮೆಂಟ್‌ವರೆಗೆ ಕೆಲಸ ಆದ ನಂತರ ತೀರಾ ಇಕ್ಕಟಾದ ಪ್ರದೇಶ ಎಂದು ಹೇಳಿ ಅದನ್ನು ರದ್ದುಪಡಿಸಿ ಬೇರೆ ಸ್ಥಳದಲ್ಲಿ ಕಾಮಗಾರಿ ನಡೆದಿದೆ.

ಜಿಲ್ಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ಸ್ಥಳ ಇಲ್ಲದೆ ಕಾರಣ ಕಲಾವಿದರೂ, ಸಾಹಿತಿಗಳು ಇಂದಿಗೂ ಪರದಾಡುತ್ತಿದ್ದಾರೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಒಂದು ಜಿಲ್ಲಾ ರಂಗಮAದಿರ ಇರಬೇಕು, ಆ ಮೂಲಕ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರ ಜೀವಂತವಿದ್ದು, ಅಭಿವೃದ್ಧಿಗೊಳ್ಳಬೇಕೆಂಬ ಉz್ದೆÃಶದಿಂದ ಸರ್ಕಾರ ಅನೇಕ ವರ್ಷಗಳ ಹಿಂದೆಯೇ ಎಲ್ಲಡೆ ಇದಕ್ಕೆ ಸ್ಥಳ, ಅನುದಾನ ನೀಡಿದೆ.

ಅದರಂತೆ ಇಲ್ಲೂ ಕೂಡ ಇದು ಸಕಾರಗೊಳ್ಳಲಿ ಎಂಬ ಉz್ದÉÃಶದಿಂದ ಚಿತ್ತಾಪುರ ರಸ್ತೆ ಜಿಲ್ಲಾಧಿಕಾರಿಗಳ ಮನೆ ಎದುರಿನ ಗುಡ್ಡದ ಕೆಳಗೆ ಸುಮಾರು ೨ಎಕರೆಯಷ್ಟು ಜಾಗ ನೀಡಿದ್ದು, ಅಲ್ಲಿ ಕನ್ನಡ ಮತ್ತು ಸಂಸ್ಕöçತಿ ಇಲಾಖೆಯಿಂದ ೨ ಕೋಟಿ ರೂ. ಮತ್ತು ಕೆಕೆಆರ್‌ಡಿಬಿಯಿಂದ ೫೩ ಲಕ್ಷ ರೂ.ಅನುದಾನ ಮಂಜೂರಾಗಿ, ಈಗ ೧.೬೦ ಕೋಟಿ ರೂ.ಖರ್ಚು ಮಾಡಿ ರಂಗ ಮಂದಿರದ ಕಟ್ಟಡ ಒಂದು ಹಂತಕ್ಕೆ ತಂದು ನಿಲ್ಲಿಸಲಾಗಿದೆ.

ಆದರೆ ಲೋಕಾರ್ಪಣೆಗೊಂಡು ಬಳಕೆ ಮಾಡಬೇಕಾದರೆ ಇನ್ನೂ ಸುಮಾರು ೨ ಕೋಟಿ ರೂ.ಗೂ ಅಧಿಕ ಅನುದಾನ ಬೇಕೆಂಬ ಬೇಡಿಕೆ ಕಟ್ಟಡ ಕಾಮಗಾರಿ ಕೈಗೊಳ್ಳುತ್ತಿರುವ ಲ್ಯಾಂಡ್ ಆರ್ಮಿ ಇಲಾಖೆ ಅಧಿಕಾರಿಗಳದ್ದಾಗಿದೆ. ಈಗ ಬಿಡುಗಡೆಯಾಗಿರುವ ಅನುದಾನದಲ್ಲಿಯೇ ಇನ್ನೂ ೪೦ ಲಕ್ಷ ರೂ. ಲ್ಯಾಂಡ್ ಆರ್ಮಿಗೆ ನೀಡಬೇಕಾಗಿದೆ ಎಂಬ ಮಾಹಿತಿ ಇದ್ದು, ೨೫೦ ಉದ್ದ ಮತ್ತು ೧೨೦ ಅಡಿ ಅಗಲ ಜಾಗದಲ್ಲಿ ನೆಲಮಹಡಿ ಮತ್ತು ಮೊದಲ ಅಂತಸ್ತಿನಲ್ಲಿ ಈ ಕಟ್ಟಡ ನಿರ್ಮಿಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net