ಮುಖ್ಯವಾಹಿನಿಗೆ ವಿಶ್ವಕರ್ಮ ಸಮಾಜ ತರಲು ಟ್ರಸ್ಟ್ ಶ್ರಮ

ebcf6b9d-805e-4b65-84f8-8a4110b6b02b
Published on

ಮೈಸೂರು: ವಿಶ್ವಕರ್ಮ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಟ್ರಸ್ಟ್ ಶ್ರಮಿಸುತ್ತಿದೆ ಎಂದು ವಿಜಯನಗರದ ವಿಶ್ವಕರ್ಮ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಕೆಂಡಗಣ್ಣ ವಿಶ್ವಕರ್ಮ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಟ್ರಸ್ಟ್ ಹೊರತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಈ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯ ಶಿಬಿರ, ಸದಸ್ಯತ್ವ ಪಡೆದ ಸದಸ್ಯರಿಗೆ ಕೌಟುಂಬಿಕ ವಿಮಾ ಪಾಲಿಸಿ, ವಿಶ್ವಕರ್ಮ ಕೋ ಆಪರೇಟಿವ್ ಬ್ಯಾಂಕ್ ಆರಂಭ ಮೊದಲಾದ ಯೋಜನೆ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಸಮುದಾಯದವರು ಟ್ರಸ್ಟ್ ಸದಸ್ಯರಾಗಬೇಕು ಎಂದು ಸಲಹೆ ನೀಡಿದರು.

ಪಾಲಿಕೆ ಸದಸ್ಯರಾದ ರಮೇಶ್, ಛಾಯಾದೇವಿ, ಮುಖಂಡರಾದ ಪುಟ್ಟಸ್ವಾಮಾಚಾರ್, ಲಿಂಗಣ್ಣಾಚಾರ್, ರಾಮಚಂದ್ರಾಚಾರ್, ಶಾಂತಮ್ಮ, ಸರಸ್ವತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net