

ಕೊರಟಗೆರೆ: ಪಟ್ಟಣದ ಪ್ರಧಾನ ರಸ್ತೆಯ ಮಧ್ಯಭಾಗದಲ್ಲಿ ಅನುಮತಿ ಪಡೆಯದೆ ಅವೈಾನಿಕವಾಗಿ ನಾಲ್ಕು ವರ್ಷದ ಹಿಂದೆ ನಿರ್ಮಿಸಲಾಗಿತ್ತು ಎನ್ನಲಾದ ಕನ್ನಡ ಧ್ವಜಕಟ್ಟೆಯನ್ನು ಭಾನುವಾರ ಮುಂಜಾನೆ ತೆರವುಗೊಳಿಸಲಾಯಿತು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿನ ರಸ್ತೆ ಮಧ್ಯ ಭಾಗದಲ್ಲಿ ನಾಲ್ಕು ವರ್ಷಗಳ ಹಿಂದೆ ಕೆಲವು ಕನ್ನಡ ಪರ ಸಂಟನೆಗಳಿಂದ ಕನ್ನಡ ಧ್ವಜಸ್ತಂಭ ನೆಟ್ಟು ಸುತ್ತಲೂ ಬೃಹತ್ ಕಟ್ಟೆ ನಿರ್ಮಿಸಲಾಗಿತ್ತು. ರಸ್ತೆಯ ಮಧ್ಯ ಭಾಗದಲ್ಲಿ ಸ್ಥಳ ಓತ್ತುವರಿಯಾಗಿದ್ದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಪ್ರತಿ ಸೋಮವಾರ ಸಂತೆಗೆ ಬರುವ ಜನರು ಕಟ್ಟೆಯ ಅಕ್ಕಪಕ್ಕ ದ್ವಿಚಕ್ರವಾಹನ ನಿಲ್ಲಿಸುತ್ತಿದ್ದರಿಂದ ವಾಹನ ದಟ್ಟಣೆಯಾಗಿ ಸಮಸ್ಯೆ ಹೆಚ್ಚುತ್ತಿತ್ತು. ಇದೇ ಸ್ಥಳದಲ್ಲಿ ಹಲವಾರು ಬಾರಿ ಅಪಘಾತಗಳಾಗಿ ಸಾವು, ಗಂಭೀರ ಗಾಯಗಳಾಗಿರುವ ಟನೆಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಸಂಬಂಧ ಪಟ್ಟ
ಇಲಾಖೆಗಳಿಗೆ ಪತ್ರ ಬರೆದಿತ್ತು ಎನ್ನಲಾಗಿದ್ದು, ಈಗ ಅಧಿಕಾರಿಗಳು ಧ್ವಜಕಟ್ಟೆ ತೆರುವು ಮಾಡಿದ್ದಾರೆ.
ಈ ಧ್ವಜಕಟ್ಟೆ ನಿರ್ಮಾಣದಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಮತ್ತು ಅಪಘಾತಗಳಿಗೆ ಕಾರಣವಾಗಿದೆ ಎಂದು ನಾಗರಿಕರು ದೂರು ನೀಡಿದ ಹಿನ್ನೆಲೆ ತೆರವುಗೊಳಿಸಲಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು. ಲೋಕೋಪಯಾಗಿ ಎಇಇ ಸ್ವಾಮಿ, ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಅನಿಲ್, ಪಿಎಸ್ಐ ಚೇತನ್ ಕುಮಾರ್, ಯೋಗೀಶ್, ಪಪಂ ಮುಖ್ಯಾಧಿಕಾರಿ ಉಮೇಶ್, ಬೆಸ್ಕಾಂ ಎಇಇ ಪ್ರಸನ್ನ ಕುಮಾರ್, ಕೊರಟಗೆರೆ, ಮಧುಗಿರಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಪಿಡಬ್ಲ್ಲ್ಯುಡಿ ಎಇಇ ತೋರಿಸಿದ ಸ್ಥಳದಲ್ಲೆ ನಾವು 4 ವರ್ಷದ ಹಿಂದೆ ಧ್ವಜಸ್ತಂಭ ನಿರ್ಮಾಣ ಮಾಡಿದ್ದೇವು. ಆಗ ಅಧಿಕಾರಿಗಳು ಏಕೆ ಪ್ರಶ್ನಿಸಿಲ್ಲ. ಪಿಡಬ್ಲ್ಲ್ಯುಡಿ ಮತ್ತು ಪಪಂ ನಮಗೆ ಅಂದು ಅನುಮತಿ ನೀಡಿದ್ದರು. ಈ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಕನ್ನಡ ಧ್ವಜಸ್ತಂಭದ ತೆರವಿನಿಂದ ಕನ್ನಡಪರ ಸಂಟನೆಗಳಿಗೆ ನೋವಾಗಿದೆ. | ಕೆ.ಎನ್.ನಟರಾಜ್ ಕರವೇ ಅಧ್ಯ. ಕೊರಟಗೆರೆ