

ದೋರನಹಳ್ಳಿ: ಎಲ್ಲಿ ನೋಡಿದರಲ್ಲಿ ಮಳೆ ನೀರು. ಶಾಲಾ ಪ್ರವೇಶ ದ್ವಾರದಲ್ಲಿ ಮಳೆಗೆ ನೀರಿಗೆ ಕೊಚ್ಚಿಹೋಗಿ ಹೊಂಡ ನಿರ್ಮಾಣ.ಮುಖ್ಯಗುರು ಹಾಗೂ ಮಕ್ಕಳ ತರಗತಿ ಕೋಣೆಗಳು ಕೂಡ ಮಳೆಗೆ ತಟ ತಟ ಹನಿ ನೀರು ಜಿನುಗುಡುತ್ತಿರುವುದು ಹೀಗೆ ಮಳೆಯಿಂದ ಹತ್ತು ಹಲವು ಸಮಸ್ಯೆಗೆ ಸಿಲುಕಿ ನಲಗುತ್ತಿವೆ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು.
ದೋರನಹಳ್ಳಿ ಎಂದರೆ ತಟ್ಟನೆ ನೆನಪಾಗುವುದು ಚುನಾವಣೆಯಲ್ಲಿ ಮಾತ್ರ ಎಂದರೆ ತಪ್ಪಾಗಲಾರದು. ಕಾರಣ ಇಲ್ಲಿ ದೊಡ್ಡ ಪ್ರಮಾಣದ ಮತಗಳಿವೆ. ಅಷ್ಟೇ ಸೂಕ್ಷö್ಮವಾದ ಮತಗಟ್ಟೆಗಳೂ ಇವೆ. ಆದರೆ ಆ ಸಂದರ್ಭ ಮುಗಿದದ ಮೇಲೆ ಯಾವ ಚುನಾಯಿತ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಈ ಗ್ರಾಮ ಕನಸಿನಲ್ಲಿಯೂ ಕೂಡ ನೆನಪಾಗುವುದಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ.
ಗ್ರಾಮದಲ್ಲಿ ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲೆ, ಒಂದು ಪ್ರೌಢಶಾಲೆ ಸ್ಥಳೀಯವಾಗಿವೆ. ಆದರೆ ಅಲ್ಲಿನ ಸಮಸ್ಯೆ ಬಗ್ಗೆ ಹೇಳೊರಿಲ್ಲ, ಕೇಳೊರಿಲ್ಲ ಎಂಬAತಾಗಿದೆ. ಅದರಲ್ಲೂ ಮಳೆಗಾಲ ಬಂತೆAದರೆ ಸಾಕು ಅವು ಶಾಲೆಗಳೋ ಅಥವಾ ಭತ್ತದ ಗದ್ದೆಗಳೋ ಎಂಬAತೆ ಭಾಸವಾಗುತ್ತದೆ. ಅಷ್ಟೊಂದು ಮಳೆ ನೀರು ಶಾಲಾ ಆವರಣಕ್ಕೆ ನುಗ್ಗಿ ಹಾಳು ಮಾಡುತ್ತದೆ. ಆದರೆ ಇದ್ಯಾವುದು ನಮ್ಮ ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಸಂಬAಧವಿಲ್ಲದAತೆ ವರ್ತಿಸುತ್ತಾರೆ.
ಅಂಬೇಡ್ಕರ್ ನಗರದ ಹಿರಿಯ ಪ್ರಾಥಮಿಕ ಶಾಲೆಯಂತೂ ದ್ವೀಪದಂತೆ ಗೋಚರಿಸುತ್ತದೆ. ಶಾಲೆಯ ಕಂಪೌAಡ ಎರಡು ವರ್ಷದ ಹಿಂದೆ ಭಾರಿ ಮಳೆಗೆ ಕುಸಿದು ಬಿದ್ದಿದೆ. ಈವರೆಗೆ ದುರಸ್ತಿ ಕಂಡಿಲ್ಲ. ಇನ್ನೂ ಅಲ್ಲಿನ ಮೂರನಾಲ್ಕು ತರಗತಿ ಕೋಣೆಗಳು ತೊಟ್ಟಿಕ್ಕುತ್ತಿವೆ. ಇನ್ನೂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳ ಕೋಣೆಯೇ ಮಳೆ ನೀರಿನಿಂದ ಸೋರುತ್ತಿದೆ. ಜೀವ ಭಯದಲ್ಲೇ ಶಿಕ್ಷಕರು ಶಾಲೆಯಲ್ಲಿ ಕಾಲ ಕಳೆಯುವಂತಾಗಿದೆ.
ಗ್ರಾಮದಿAದ ಹರಿದು ಬಂದ ಮಳೆ ನೀರು ನೇರವಾಗಿ ಶಾಲಾ ಮೈದಾನಕ್ಕೆ ನುಗ್ಗುತ್ತದೆ ಇದರಿಂದ ಶಾಲಾ ಆವರಣ ಕೆರೆಯಂತಾಗುತ್ತದೆ. ಮೂರು ದಿನದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಶಾಲಾ ಮುಖ್ಯ ಗೇಟ್ ಬಳಿ ಮಣ್ಣು ಕೊಚ್ಚಿ ಹೋಗಿದ್ದರಿಂದ ಮಕ್ಕಳಿಗೆ ಮೊಟ್ಟೆ ವಿತರಿಸಲು ಬಂದ ವಾಹನವೊಂದು ಸಿಕ್ಕಿಹಾಕಿಕೊಂಡ ಘಟನೆ ಯಾರು ಮರೆಯುವಂತಿಲ್ಲ.
ಗ್ರಾಮದ ಹಿರೇ ಅಗಸಿಯಲ್ಲಿರುವ ಶಾಲೆ ಕೂಡ ಇದಕ್ಕೆ ಹೊರತಲ್ಲ. ಇಲ್ಲಿನ ಕೋಣೆಗಳು ನೋಡಿ ಕೆಲ ಮಕ್ಕಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ. ಮಳೆಗಾಲದಲ್ಲಿ ಆ ಮಟ್ಟಿಗೆ ಸೋರುತ್ತವೆ. ಇನ್ನೂ ಶಿಕ್ಷಕರು ಮಕ್ಕಳನ್ನು ಎಲ್ಲಿ ಕೂರಿಸಿ ಪಾಠ ಹೇಳಬೇಕು ಎಂಬುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ. ಗ್ರಾಮದ ಉರ್ದು ಶಾಲೆ ಆವರಣದಲ್ಲೂ ಮಳೆ ನೀರು ನಿಂತು ಕೆಸರುಮಯವಾಗಿದೆ.
ಈ ಎಲ್ಲ ಶಾಲೆಗಳಿಂದ ೮ನೇ ತರಗತಿಯಿಂದ ೧೦ನೇ ತರಗತಿ ಓದಲು ಬರುವ ಪ್ರೌಢಶಾಲೆ ಕೂಡ ಹೊರತಲ್ಲ. ಅಲ್ಲಿ ಶಿಕ್ಷಕರು, ತರಗತಿ ಕೋಣೆಗಳ ಮೀರಿದ ವಿದ್ಯಾರ್ಥಿಗಳ ಸಂಖ್ಯೆ ಇದೆ. ಅಲ್ಲಿಯೂ ಮಳೆ ಬಂದರೆ ಮೈದಾನವೆಲ್ಲ ನೀರು ನಿಂತರೆ ಕೋಣೆಗಳಲ್ಲಿ ಅಲ್ಲಲ್ಲಿ ಮಳೆ ನೀರು ಜಿನುಗುತ್ತದೆ. ಇದರಿಂದ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಅಕ್ಷರ ದೇಗುಲಗಳು ಅಕ್ಷರಶಃ ನಲುಗುತ್ತಿದ್ದು ಈ ಸಮಸ್ಯೆಗಳಿಗೆ ಪರಿಹಾರ ಯಾವಾಗ ಎಂಬ ಯಕ್ಷ ಪ್ರಶ್ನೆ ಗ್ರಾಮಸ್ಥರಿಗೆ ಕಾಡುತ್ತಿದೆ.