ಮುಖ್ಯ ರಸ್ತೆಯಲ್ಲಿರುವ ವೃತ್ತ ತೆರವಿಗೆ ಮನವಿ

PH 12
Published on

ಯಡ್ರಾಮಿ: ಮುಖ್ಯ ರಸ್ತೆಯಲ್ಲಿರುವ ಟಿಪ್ಪು ಸುಲ್ತಾನ್ ವೃತ್ತದಿಂದಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ತೆರವುಗೊಳಿಸಬೇಕು ಎಂದು ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ಸಿದ್ದು ನಾಯ್ಕೋಡಿ, ಮುಖಂಡ ಗಿರೀಶ ಗುತ್ತೇದಾರ್ ಒತ್ತಾಯಿಸಿದ್ದಾರೆ.

ತಹಸೀಲ್ದಾರ್‌ಗೆ ಶುಕ್ರವಾರ ಮನವಿಪತ್ರ ಸಲ್ಲಿಸಿರುವ ಅವರು, 2009ರ ನ್ಯಾಯಾಲಯದ ತೀರ್ಪಿನಂತೆ ರಸ್ತೆಗಳಲ್ಲಿ ವೃತ್ತಗಳನ್ನು ನಿರ್ಮಿಸಬಾರದು. ಆದರೂ ಮುಖ್ಯ ರಸ್ತೆಯಲ್ಲಿ ಸರ್ಕಲ್ ನಿರ್ಮಿಸಿದ್ದರಿಂದ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಕೂಡಲೇ ತೆರವು ಮಾಡದಿದ್ದರೆ ಹೋಗಾಟ ನಡೆಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net