ಮುಖ್ಯ ಪರೀಕ್ಷೆ ರದ್ದು ಪಡಿಸಲು ವಕೀಲರ ಒತ್ತಾಯ

22Jaggu4_Web
ಜುಲೈ 23 ಮತ್ತು 24ರಂದು ಜರುಗಿದ ಸಹಾಯಕ ಸರ್ಕಾರಿ ಅಭಿಯೋಜಕರ ಮತ್ತು ಸಹಾಯಕ ಸರ್ಕಾರಿ ಪ್ಲೀಡರ್‌ಗಳ ಮುಖ್ಯ ಪರೀಕ್ಷೆ ರದ್ದು ಪಡಿಸಿ, ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾ ವಕೀಲರ ಸಂಘದಿಂದ ಸೋಮವಾರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು. ಪ್ರಭು ಯತ್ನಟ್ಟಿ, ಸಚಿನ ಶಿವಣ್ಣವರ, ಗಿರಿರಾಜ ಪಾಟೀಲ, ಮಹಾಂತೇಶ ಪಾಟೀಲ, ಅಭಿಷೇಕ ಉದೋಶಿ ಇತರರಿದ್ದರು.
Published on

ಬೆಳಗಾವಿ: ಜುಲೈ 23 ಮತ್ತು 24ರಂದು ಜರುಗಿದ ಸಹಾಯಕ ಸರ್ಕಾರಿ ಅಭಿಯೋಜಕರ ಮತ್ತು ಸಹಾಯಕ ಸರ್ಕಾರಿ ಪ್ಲೀಡರ್‌ಗಳ ಮುಖ್ಯ ಪರೀಕ್ಷೆ ರದ್ದು ಪಡಿಸಿ, ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ವಕೀಲರ ಸಂಘದಿಂದ ಸೋಮವಾರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.

ಉತ್ತರ ಪತ್ರಿಕೆಯ ಒಂದೇ ಪುಟದಲ್ಲಿ 10 ಅಂಕದ ಪ್ರಶ್ನೆಗಳಿಗೆ ಉತ್ತರಿಸಲು ಪರೀಕ್ಷಾರ್ಥಿಗಳಿಗೆ ಯಾವುದೇ ಮುನ್ಸೂಚನೆ ನೀಡಿಲ್ಲ, ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಯು ಒಂದರಲ್ಲಿಯೇ ಇರುವುದರಿಂದ ಗೊಂದಲವಾಗಿದೆ. ಪ್ರಶ್ನೆಗಳು ಪಠ್ಯಕ್ರಮಕ್ಕೆ ಅನುಗುಣವಾಗಿ ಇಲ್ಲ. ಕರ್ನಾಟಕದ ಒಟ್ಟು ಪರೀಕ್ಷಾರ್ಥಿಗಳಲ್ಲಿ ಶೇ. 80 ಜನ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದಾರೆ. ಆದರೆ, ನ್ಯಾಷನಲ್ ಲಾ ಕಾಲೇಜಿನವರು ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳನ್ನು ಗಮನದಲ್ಲಿಟ್ಟುಕೊಳ್ಳದೆ ಪ್ರಶ್ನೆ ಪತ್ರಿಕೆಗಳನ್ನು ಗೂಗಲ್ ತರ್ಜುಮೆ ಮಾಡಿರುವುದರಿಂದ ಕನ್ನಡ ಪ್ರಶ್ನೆಗಳು ವೈಜ್ಞಾನಿಕವಾದ ರೀತಿಯಲ್ಲಿ ತಯಾರಿಸಿಲ್ಲ. ಉತ್ತರ ಪತ್ರಿಕೆಗಳನ್ನು ಪರೀಕ್ಷಾರ್ಥಿಗಳಿಗೆ ಹಂಚುವ ಸಂದರ್ಭದಲ್ಲಿ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾರ್ಥಿಗಳ ಹಾಗೂ ಮೇಲ್ವಿಚಾರಕರ ಸಹಿಗಳನ್ನು ಪಡೆಯದೆ ತೆರೆದ ಉತ್ತರ ಪತ್ರಿಕೆಗಳನ್ನು ಹಂಚಿದ್ದಾರೆಂದು ಆರೋಪಿಸಿದ ಅವರು, ಈ ಎಲ್ಲ ಕಾರಣಗಳಿಂದ ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರಭು ಯತ್ನಟ್ಟಿ, ಸಚಿನ ಶಿವಣ್ಣವರ, ಗಿರಿರಾಜ ಪಾಟೀಲ, ಮಹಾಂತೇಶ ಪಾಟೀಲ, ಅಭಿಷೇಕ ಉದೋಶಿ, ಆದರ್ಶ ಪಾಟೀಲ, ಪ್ರಭಾಕರ ಪವಾರ, ಪೂಜಾ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net