

ಕೌಜಲಗಿ: ಟಿಪ್ಪರ್ ಹಾಗೂ ಕಾರಿನ ಮಧ್ಯೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟ ಟನೆ ಗೋಕಾಕ ತಾಲೂಕಿನ ಬಿಲಕುಂದಿ ಬಳಿ ಭಾನುವಾರ ಸಂಭವಿಸಿದೆ.
ಕೌಜಲಗಿ ಗ್ರಾಮದ ನಿವಾಸಿ, ನಿವೃತ್ತ ಬಿಎಸ್ಎ್ ಯೋಧ ಶಿವಾನಂದ ಹುಕ್ಕೇರಿ (45) ಹಾಗೂ ನಿಂಗಾಪುರ ಗ್ರಾಮದ ನಿವಾಸಿ ಕೆಂಚಪ್ಪ ಕರಿಗಾರ (50) ಮೃತರು. ಇವರು ಕಪರಟ್ಟಿ ಕಡೆಯಿಂದ ಕೌಜಲಗಿಗೆ ಕಾರಿನಲ್ಲಿ ಬರುತ್ತಿದ್ದರು. ಬಿಲುಕುಂದಿ ಕಡೆಯಿಂದ ಕಪರಟ್ಟಿಗೆ ಹೊರಟಿದ್ದ ಟಿಪ್ಪರ್ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಟನೆ ಸಂಭವಿಸಿದೆ. ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.