ಮುಖಕ್ಕೆ ಪ್ಲಾಸ್ಟಿಕ್ ಹಾಕಿಕೊಂಡು ಎಟಿಎಂ ಕಳ್ಳತನಕ್ಕೆ ಯತ್ನ.

1658887445775
Published on

ವಿಜಯಪುರ: ಯಾರಿಗೂ ಗೊತ್ತಾಗಬಾರದು ಎಂದು ಮುಖಕ್ಕೆ ಪ್ಲಾಸ್ಟಿಕ್ ಹಾಕಿಕೊಂಡು ಎಟಿಎಂ ಕಳ್ಳತನಕ್ಕೆ ಯತ್ನ ಮಾಡಿದ ಆರೋಪಿಯೊಬ್ಬನನ್ನು ಪೊಲೀಸರು ಅಂದರ್ ಮಾಡಿದ್ದಾರೆ. ತಿಕೋಟಾ ಪೊಲೀಸರ ಸಮಯ ಪ್ರಜ್ಞೆಯಿಂದ ATM ದರೋಡೆ ತಪ್ಪಿದೆ. ವಿಜಯಪುರ ಜಿಲ್ಲೆ ತಿಕೋಟಾ ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದ ಪೋಲಿಸರಿಂದ ಆರೋಪಿಯನ್ನು ಬಂಧಿಸಲಾಗಿದೆ.‌‌‌ ತಿಕೋಟಾ ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರ ಇರುವ ಇಂಡಿಯಾ ಒನ್ ಎಟಿಎಂಗೆ ರಾತ್ರಿ ನುಗ್ಗಿದ್ದ ಕಳ್ಳ, ಹಣ ಎಗರಿಸಲು ಪ್ರಯತ್ನಿಸುತ್ತಿದ್ದಾಗ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುವ ಪೋಲಿಸ್ ಸಿಬ್ಬಂದಿ ಸುನೀಲ್ ಪೋತ ಹಾಗೂ ಸಾಬು ಕಾಂಬಳೆಯವರಿಂದ ಮಿಂಚಿನ‌ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಕಳ್ಳನನ್ನು ಹಿಡಿದು ಠಾಣೆಗೆ ಕರೆದೊಯ್ದ ಪೊಲೀಸ್ ಸಿಬ್ಬಂದಿ‌, ತೀವ್ರ ವಿಚಾರಣೆ ಮಾಡುತ್ತಿದ್ದಾರೆ. ತಲೆಗೆ ಪ್ಲಾಸ್ಟಿಕ್ ಕಾಗದ ಹಾಕಿಕೊಂಡು ಕೈಯಲ್ಲಿ‌ ಕಟ್ಟಿಗೆ ಹಿಡಿದುಕೊಂಡು ಎಟಿಎಂ ಒಳಗೆ ನುಗ್ಗಿದ ಕಳ್ಳ, ಸಿಸಿ ಕ್ಯಾಮರಾ ಒಡೆದು, ಸೇಫ್ ಲಾಕರ್ ಹಾಗೂ ಪಾಸವರ್ಡ ಕೀ ಬೋರ್ಡ ಡ್ಯಾಮೇಜ್ ಮಾಡಿ ಗರಗಸದಿಂದ ಎಟಿಎಂ ಕೊರೆದಿದ್ದಾನೆ. ಮಲ್ಲಿಕಾರ್ಜುನ ಮಾಳಿ ಎಂಬುವ ಸ್ಥಳಿಯ ನಿವಾಸಿಯೇ ಕಳ್ಳತನಕ್ಕೆ ಯತ್ನಿಸಿದ್ದು, ಎಟಿಎಂನಿಂದ ಹಣ ಹೋಗಿಲ್ಲ. ಗಸ್ತು ಸಿಬ್ಬಂದಿ ಅದೇ ಸಮಯಕ್ಕೆ ಅಲ್ಲಿ ಗಸ್ತು ಮಾಡಿದ್ದರಿಂದ‌ ಕಳ್ಳ ಸೆರೆ ಸಿಕ್ಕಿದ್ದಾನೆ. ಈ ಕುರಿತು ತಿಕೋಟಾ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net