

ವಿಜಯಪುರ: ಹನುಮಗಿರಿ ಆಧ್ಯಾತ್ಮ ವಿದ್ಯಾಶ್ರಮ ವಿಜಯಪುರ ವತಿಯಿಂದ ಇಂದು ವೈಕುಂಠ (ಮುಕ್ತಿ) ವಾಹನವನ್ನು ಸಮರ್ಪಣೆ ಮಾಡಲಾಯಿತು. ಸಮಸ್ತ ಬ್ರಾಹ್ಮಣ ಸಮಾಜಕ್ಕೆ ವೈಕುಂಠ ವಾಹನವನ್ನು ಅತ್ಯಂತ ಕಡಿಮೆ ದರದಲ್ಲಿ ಹಾಗೂ ಬಡವರಿಗೆ ಸಂಪೂರ್ಣ ಉಚಿತವಾಗಿ ಕೊಡುವ ನಿರ್ಧಾರ ಮಾಡಲಾಗಿದೆ. ಬಡವರಿಗಾಗಿ ವಾಹನದ ಜೊತೆಗೆ ಅಂತ್ಯಕರ್ಮಕ್ಕೆ ಬೇಕಾಗುವ ಸಾಮಗ್ರಿಗಳನ್ನೂ ಸಹ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹನುಮಗಿರಿ ಆಧ್ಯಾತ್ಮ ವಿದ್ಯಾಶ್ರಮದ ಕಾರ್ಯಕಾರಿ ಮಂಡಳಿ ತಿಳಿಸಿದೆ.