ಮುಕ್ತ ವಿವಿ, ರಾಜಸ್ತಾನದ ವರ್ಧಮಾನ್ ಮಹಾವೀರ್ ಮುಕ್ತ ವಿವಿ ಒಡಂಬಡಿಕೆ

15
Published on

ಮೈಸೂರು: ದೂರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮತ್ತು ರಾಜಸ್ಥಾನದ ವರ್ಧಮಾನ್ ಮಹಾವೀರ್ ಮುಕ್ತ ವಿಶ್ವವಿದ್ಯಾಲಯ ಸೋಮವಾರ ಒಡಂಬಡಿಕೆ ಮಾಡಿಕೊಂಡಿವೆ.

ಸ್ವಯಂ ಕಲಿಕಾ ಸಾಮಗ್ರಿ, ಬೋಧಕರು, ಶೈಕ್ಷಣಿಕ ಕಾರ್ಯಕ್ರಮದ ವಿನಿಮಯಕ್ಕಾಗಿ ಉಭಯ ವಿವಿಗಳು ಒಪ್ಪಂದ ಮಾಡಿಕೊಂಡಿವೆ. ಇದರಿಂದ ಎರಡೂ ವಿಶ್ವವಿದ್ಯಾಲಯಗಳು ಹೊಸ ಶೈಕ್ಷಣಿಕ ಕಾರ್ಯಕ್ರಮ ಪ್ರಾರಂಭಿಸಲು ಅವಕಾಶ ದೊರೆಯಲಿದೆ.

ವರ್ಧಮಾನ್ ಮಹಾವೀರ ಮುಕ್ತ ವಿವಿ ಕುಲಸಚಿವ ಕೆ.ಕೆ.ಗೋಯಲ್ ಮತ್ತು ಕರಾಮುವಿ ಕುಲಸಚಿವ ಪ್ರೊ.ಕೆ.ಎನ್. ಮೂರ್ತಿ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿದ್ದಾರೆ.

ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಸಿಐಕ್ಯೂಎ ನಿರ್ದೇಶಕ ಡಾ.ನಿರಂಜನ್ ರಾಜ್, ಡಾ.ಎಚ್. ರಾಜೇಶ್ವರಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net