ಮುಕ್ತ ವಿವಿ ಕಲಪತಿಯಾಗಿ ಪ್ರೊ.ಶರಣಪ್ಪ ವೈಜನಾಥ ಹಲಸೆ ಅಧಿಕಾರ ಸ್ವೀಕಾರ

40
Published on

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಶರಣಪ್ಪ ವೈಜನಾಥ ಹಲಸೆ ಶುಕ್ರವಾರ ರಾತ್ರಿ ಅಧಿಕಾರ ಸ್ವೀಕರಿಸಿದರು.


ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಈ ಕುರಿತು ಶುಕ್ರವಾರ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲೇ ಇಂದೇ ಮೈಸೂರಿನ ಮುಕ್ತಗಂಗೋತ್ರಿಯಲ್ಲಿರುವ ವಿವಿ ಆಡಳಿತ ಕಚೇರಿಗೆ ಪ್ರೊ.ಹಲಸೆ ಅವರು  ದೌಡಾಯಿಸಿದರು. ಪ್ರಭಾರ ಕುಲಪತಿಯೂ ಆದ ಆಡಳಿತಾತ್ಮಕ ಕುಲಸಚಿವ ಪ್ರೊ.ಎ.ಖಾದರ್ ಪಾಷಾ ಅವರು ನೂತನ ಕುಲಪತಿಗೆ ಅಧಿಕಾರವನ್ನು ಹಸ್ತಾಂತರಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net