ಮುಕ್ಕಡಹಳ್ಳಿಯಲ್ಲಿ ಕೃಷಿ ಕಾರ್ಯಾನುಭವ ಶಿಬಿರ

05Rajesh6
Published on

ಚಾಮರಾಜನಗರ: ತಾಲೂಕಿನ ಮುಕ್ಕಡಹಳ್ಳಿ ಗ್ರಾಮದಲ್ಲಿ ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ವತಿಯಿಂದ ಇತ್ತೀಚೆಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ನಡೆಯಿತು.

ಶಿಬಿರದಲ್ಲಿ ಪಾಲ್ಗೊಂಡಿದ್ದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ತೆಂಗಿನ ಸಮಗ್ರ ಬೆಳೆ ನಿರ್ವಹಣೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳಾದ ಸಚಿನ್, ಕಾರ್ತಿಕ್, ಸಮ್ದಾನಿ ಪಠ್ಯ ವಿಷಯದ ಬಗ್ಗೆ ಮಾದರಿಗಳು, ಚಾರ್ಟ್‌ಗಳು, ಪವರ್ ಪಾಯಿಂಟ್ ಮೂಲಕ ರೈತರ ಮುಂದೆ ವಿಷ ಪ್ರಸ್ತುತಿ ಪಡಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಜಿ.ನಾಗೇಶಾ, ಡಾ.ಪವಿತ್ರಾ ಮತ್ತು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net