ಮುಕರಂಬಾದಲ್ಲಿ ಶ್ರೀ ರೇವಣಸಿದ್ಧೇಶ್ವರ ವಿರಕ್ತ ಮಠದ ಜಾತ್ರೆ ವೈಭವ

IMG-20230912-WA0003
Published on

ಚಿಂಚೋಳಿ: ಮತಕ್ಷೇತ್ರದ ಕಾಳಗಿ ತಾಲೂಕಿನ ಮುಕರಂಬಾ ಗ್ರಾಮದ ಆರಾಧ್ಯ ದೈವ ಶ್ರೀ ರೇವಣಸಿದ್ಧೇಶ್ವರ ವಿರಕ್ತಮಠದ ಶ್ರೀ ರೇವಣಸಿದ್ಧೇಶ್ವರ ಪಲ್ಲಕ್ಕಿ ಉತ್ಸವ ಅತ್ಯಂತ ಶೃದ್ಧಾ ಭಕ್ತಿಯಿಂದ ಸೋಮವಾರ ಜರುಗಿತು.

ಶ್ರಾವಣ ಮಾಸದ ಕೊನೆಯ ಸೋಮವಾರದಂದು ಶ್ರೀ ಮಠದ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು, ರಟಕಲ್ ವಿರಕ್ತಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಪಲ್ಲಕ್ಕಿ ಮಹೋತ್ಸವ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ನೇರವೇರಿತು.

ಪಲ್ಲಕ್ಕಿ ಉತ್ಸವದ ಉದ್ದಗಲಕ್ಕೂ ಪುರವಂತರ ಕುಣಿತ, ಭಜನೆ ಭಕ್ತರ ಗಮನ ಸೆಳೆಯಿತು.

ಜಾತ್ರಾ ಮಹೋತ್ಸವದಲ್ಲಿ ಚಂದ್ರಶೇಖರ ಸ್ವಾಮಿ, ವೀರಯ್ಯಸ್ವಾಮಿ, ಸಿದ್ದಯ್ಯ ಸ್ವಾಮಿ, ಶಂಭುಲಿಂಗ ಸ್ವಾಮಿ, ಮಂಜು ಮಂಠಾಳ, ರೇವಣಸಿದ್ದಪ್ಪ ಚೆಂಗಟಿ, ಸಿದ್ದು ಚಿಕ್ಕನಹಳ್ಳಿ, ವಿಜಯಕುಮಾರ ಮಳಖೇಡ, ಅಶೋಕ ಬೊಮ್ಮಣ್ಣಿ, ರೇವಣಸಿದ್ದ ಬೆನೂರ್, ರಾಜು ಶಿರೊರ್, ಅಶೋಕ ಪಾಟೀಲ, ಮನೋಹರ ಗೌಳಿ, ಸಾಗರ ಬಸವಣೂರ,ಅಣವೀರಯ್ಯ ಹೆಬ್ಬಾಳ ಸೇರಿದಂತೆ ಅನೇಕ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net