ಮುಂಬೈ ರೈಲಿಗೆ ಚಾಲನೆ

2908-Kpl-Ravi-6
Published on

ಕೊಪ್ಪಳ: ಗದಗ-ಮುಂಬೈ ರೈಲು ಸೇವೆ ಹೊಸಪೇಟೆವರೆಗೆ ವಿಸ್ತರಣೆಯಾಗಿದ್ದು, ಮಂಗಳವಾರ ಕೊಪ್ಪಳದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಸಂಸದ ಸಂಗಣ್ಣ ಕರಡಿ ರೈಲು ಬರಮಾಡಿಕೊಂಡರು.


ಜಿಲ್ಲಾ ಕೇಂದ್ರ ಕೊಪ್ಪಳ, ಹೊಸಪೇಟೆ ಕಲ್ಯಾಣ ಕರ್ನಾಟಕ ಪ್ರದೇಶಗಳಾಗಿವೆ. ಮುಂಬೈಗೆ ಈವರೆಗೆ ಈ ಮಾರ್ಗವಾಗಿ ರೈಲು ಸೇವೆ ಇರಲಿಲ್ಲ. ಮುಂಬೈಗೆ ಸೇವೆ ಆರಂಭಿಸಬೇಕೆಂಬುದು ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ಸಂಸದ ಸಂಗಣ್ಣ ಕರಡಿ ಈ ಸಂಬಂಧ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು. ಮನವಿ ಮಾನ್ಯ ಮಾಡಿದ ಅಧಿಕಾರಿಗಳು ಗದಗಿನಿಂದ ಹೊಸಪೇಟೆವೆಗೆ ಮುಂಬೈ ರೈಲ್ವೆ ಸೇವೆ ವಿಸ್ತರಿಸಿ ಆದೇಶಿಸಿದ್ದಾರೆ.

ಅದರಂತೆ ಮಂಗಳವಾರ ಮೊದಲ ಬಾರಿ ಹೊಸಪೇಟೆಯಿಂದ ಮುಂಬೈಗೆ ರೈಲು (11140) ಸಂಚಾರ ಆರಂಭಿಸಿದೆ. ರೈಲು ಕೊಪ್ಪಳ ನಿಲ್ದಾಣಕ್ಕೆ ಆಗಮಿಸುತ್ತಲೇ ಹಸಿರು ನಿಶಾನೆ ಬೀಸಿದ ಸಂಸದ ಸಂಗಣ್ಣ ಬರ ಮಾಡಿಕೊಂಡರು. ಸಾರ್ವಜನಿಕರು ರೈಲು ಕಂಡು ಹರ್ಷ ವ್ಯಕ್ತಪಡಿಸಿದರು. ಕೆಲವರು ಮುಂಬೈಗೆ ಪ್ರಯಾಣ ಬೆಳೆಸಿದರು. ಪ್ರಮುಖರಾದ ರಾಘವೇಂದ್ರ ಪಾನಘಂಟಿ, ವಿ.ಎಂ.ಭೂಸನೂರಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net