ಮುಂದೆಯೂ ನನ್ನ ಬೆಂಬಲಿಸಿ

19srl1
Published on

ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಜನರ ಆಶೀರ್ವಾದ ದಿಂದ ನಾನು ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಲು ಅವಕಾಶ ದೊರೆಯಿತು. ತಾಲೂಕಿನ ಜನರ ಋಣವನ್ನು ತೀರಿಸಲು ನನ್ನ ಕೊನೆಯ ಉಸಿರಿರುವವರೆಗೆ ಸೇವೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಟ್ಟಣದಲ್ಲಿ ಭಾನುವಾರ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಈವರೆಗೆ ಯಾವ ರೀತಿ ನನ್ನನ್ನು ಬೆಂಬಲಿಸಿದ್ದೀರೋ ಅದೇ ರೀತಿ ಮುಂದೆಯೂ ಬೆಂಬಲಿಸಿ. ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡುವಂತೆ ವಿನಂತಿಸಿದರು.

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ವಿಜಯಸಂಕಲ್ಪ ಯಾತ್ರೆ ಮಾಡಿ ಎಂದರೆ ತಾವೆಲ್ಲರೂ ಇಲ್ಲಿ ವಿಜಯೋತ್ಸವ ಮಾಡುತ್ತಿದ್ದೀರಿ. ಶಿಕಾರಿಪುರ ತಾಲೂಕು ಯಡಿಯೂರಪ್ಪ ಮುಖಾಂತರ ರಾಜ್ಯಕ್ಕೆ ಚಿರಪರಿಚಯವಾಗಿದ್ದು,ಮುಂಬರುವ ಚುನಾವಣೆಯಲ್ಲಿ 224 ಕ್ಷೇತ್ರಗಳ ಚುನಾವಣೆ -Àಲಿತಾಂಶ ಬಂದಾಗ ಶಿಕಾರಿಪುರ ತಾಲೂಕಿನಲ್ಲಿ ಅತಿಹೆಚ್ಚು ಮತಗಳನ್ನು ಕೊಡುವ ಮುಖಾಂತರ ಗೆಲ್ಲಿಸಬೇಕು ಎಂದು ಹೇಳಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಮತ್ತೊಮ್ಮೆ ಅ„ಕಾರಕ್ಕೆ ಬಿಜೆಪಿ ಬರಬೇಕು ಎಂದು ಯಾತ್ರೆ ನಡೆÀಯುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಅ„ಕಾರಕ್ಕೆ ಬರುವ ಮುಖಾಂತರ ಲೋಕಸಭೆಯಲ್ಲೂ ಎಲ್ಲ 25 ಕ್ಷೇತ್ರಗಳನ್ನು ಗೆಲ್ಲುವ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಟ್ಟಂತಹ ಜನಪರ ಯೋಜನೆಗಳನ್ನು ಪ್ರತಿಯೊಂದು ಮನೆಮನೆಗೆ ಮುಟ್ಟಿಸುವ ಮುಖಾಂತರ ಮುಂಬರುವ ಚುನಾವಣೆಯಲ್ಲಿ ಈ ಹಿಂದಿಗಿಂತ ಹೆಚ್ಚಿನ ಬಹುಮತಗಳಿಂದ ಗೆಲ್ಲಿಸಿ. ಇನ್ನೂ ಹೆಚ್ಚಿನ ಸೇವೆ ಮಾಡುವಂತೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಮಾತನಾಡಿದರು. ಪ್ರಾರಂಭದಲ್ಲಿ ಸೊರಬ ರಸ್ತೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕತರ್Àರು ನಾಯಕರನ್ನು ಡೊಳ್ಳು, ಜಾಂಜ್ ಮತ್ತು ಇತÀರ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ,ಬಸ್ ನಿಲ್ದಾಣ ವೃತ್ತದಲ್ಲಿ ಹೂವಿನ ಮಳೆಗರೆದು ಭಾರಿ ಘೋಷಣೆ ಕೂಗುತ್ತ ಸ್ವಾಗತಿಸಿದರು.

ಕೆ.ರೇವಣಪ್ಪ, ಹನುಮಂತಪ್ಪ, ತಾಲ್ಲೂಕ ಅಧ್ಯಕ್ಷ ವೀರೇಂದ್ರ ಪಾಟೀಲ್, ಮಂಚಿ ಶಿವಣ್ಣ ಸೇರಿದಂತೆ ಹಲವಾರು ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net