ಮುಂದುವರೆದ ವನ್ಯಜೀವಿಗಳ ಬಲಿ

12Rajesh6
Published on

ಚಾಮರಾಜನಗರ: ಭಾಗಶಃ ಅರಣ್ಯ ಪ್ರದೇಶ ಮತ್ತು ವನ್ಯಜೀವಿಗಳ ಆವಾಸಕ್ಕೆ ಸುರಕ್ಷತೆಯ ನೆಲೆಯಾಗಿರುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಕಾಡುಪ್ರಾಣಿಗಳ ವಿಷಪ್ರಾಶನ ಬಲಿಗಳು ಸಂಭವಿಸುತ್ತಲೇ ಇವೆ.

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ಸಾವು ದೇಶವನ್ನೇ ಬೆಚ್ಚಿಬೀಳಿಸಿತ್ತು. ಹಸು ಬೇಟೆಯಾಡಿಕ್ಕೆ ಕೋಪಗೊಂಡು ಕಳೇಬರಕ್ಕೆ ವಿಷ ಹಾಕಲಾಗಿತ್ತು. ಪ್ರಕರಣದ ಆರೋಪಿಗಳಾದ ಮಾದುರಾಜು, ಕೋನಪ್ಪ, ನಾಗರಾಜುನನ್ನು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ದುರ್ಘಟನೆ ಕಾನೂನಿನ ಭಯವನ್ನು ಹೆಚ್ಚಿಸಲೇ ಇಲ್ಲ. ಇದಾದ ಕೆಲವೇ ದಿನಗಳಲ್ಲಿ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ಗ್ರಾಮದ ಬಳಿ 20 ಕೋತಿಗಳಿಗೆ ವಿಷ ಹಾಕಿ, ಆಗಲೂ ಸಾಯದೆ ಇದ್ದ ವಾನರಗಳಿಗೆ ತಲೆಗೆ ಹೊಡೆದು ಕೊಲ್ಲಲಾಗಿತ್ತು. ಇದರಲ್ಲಿ 1 ಕೋತಿ ಮಾತ್ರ ಬದುಕುಳಿಯಿತು. ಇಷ್ಟಕ್ಕೆ ನಿಲ್ಲದ ವನ್ಯಜೀವಿಗಳ ಬಲಿ ಮತ್ತೆ ಮುಂದುವರೆದು, ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿ ಬಳಿ 5-6 ವರ್ಷದ ಗಂಡು ಚಿರತೆ ವಿಷ ಪ್ರಾಶನದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಹೀಗೆ ಒಂದರ ಹಿಂದೆ ಮತ್ತೊಂದು ಪ್ರಾಣಿಗಳು ಬಲಿಯಾಗುತ್ತಿರುವುದು ಮೈಸೂರು-ಕೊಡಗು ಸಂಸದ, ರಾಜವಂಶಸ್ತ ಯದುವೀರ್ ಹೇಳಿದಂತೆ ವನ್ಯಜೀವಿಗಳಿಗೆ ರಕ್ಷಣೆ ಇಲ್ಲವೆಂಬ ಆರೋಪಕ್ಕೆ ಪುಷ್ಟಿ ನೀಡುತ್ತಿದೆ. ಅಲ್ಲದೇ, ಕಾಡಂಚಿನ ಗ್ರಾಮಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ತಾರಕಕ್ಕೇರಿರುವುದನ್ನು ಅರಣ್ಯ ಇಲಾಖೆ ತಡೆಯುವಲ್ಲಿ ವಿಲವಾಗಿದೆ. ಇದರ ಪರಿಣಾಮವಾಗಿಯೇ ವಿಷ ಪ್ರಾಶನದಂತಹ ಪ್ರಕರಣಗಳು ನಡೆಯುತ್ತಿವೆ ಎನ್ನುವುದೂ ಖಚಿತವಾಗುತ್ತಿದೆ.

ಐದು ಹುಲಿಗಳ ಸಾವು ವರದಿ ಸಲ್ಲಿಕೆಯಾಯ್ತೇ?

ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳು ಮೃತಪಟ್ಟ ಪ್ರಕರಣದ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ರಚನೆಯಾಗಿದ್ದ ಸಮಿತಿಯಿಂದ ವರದಿ ಸಲ್ಲಿಕೆಯಾಗಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಈ ಕುರಿತು ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಮಿತಿಯಲ್ಲಿದ್ದ ಕೆಲವರು ವರದಿಯನ್ನು ನೀಡಿದ್ದಾರೆ. ಇದನ್ನು ಸರ್ಕಾರಕ್ಕೆ ಇನ್ನೂ ಸಲ್ಲಿಕೆ ಮಾಡಿಲ್ಲ ಎನ್ನಲಾಗುತ್ತಿದೆ. ಹುಲಿಗಳ ಸಾವಿನ ಪ್ರಕರಣದಲ್ಲಿ ಮಾದುರಾಜು, ಕೋನಪ್ಪ, ನಾಗರಾಜು ನ್ಯಾಯಾಂಗ ಬಂಧನದಲ್ಲಿದ್ದಾರೆ. ಜು.14ರಂದು ನ್ಯಾಯಾಲಯಕ್ಕೆ ಮತ್ತೆ ವಿಚಾರಣೆಗೆ ಆಗಮಿಸಲಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಡಿಸಿಎ್ ಚಕ್ರಪಾಣಿ, ಎಸಿಎ್ ಗಜಾನನ ಹೆಗಡೆ, ಆರ್‌ಎ್ಒ ಮಾದೇಶ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿತ್ತು. ಇದಾದ ಬಳಿಕ ಕರ್ತವ್ಯಲೋಪವೆಸಗಿರುವ ಆರೋಪದಡಿ ಎಸಿಎ್ ಮತ್ತು ಆರ್‌ಎ್ಒ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಯಿತು. ಐಎ್ಎಸ್ ಅಧಿಕಾರಿ ಚಕ್ರಪಾಣಿ ವಿರುದ್ಧ ಕ್ರಮಕ್ಕೆ ಶಿಾರಸು ಮಾಡಲಾಗಿತ್ತು.

ಚಿರತೆ ವರದಿ ಏನಾಯ್ತು?

ಮಲೆ ಮಹದೇಶ್ವರ ವನ್ಯಜೀವಿಧಾಮದ ಕೌದಳ್ಳಿ ವಲಯದ ರಾಮಾಪುರ ಮತ್ತು ಮಾರ್ಟಳ್ಳಿ ಗಡಿಯಲ್ಲಿ ಚಿರತೆ ಮೃತಪಟ್ಟಿದ್ದ ಕುರಿತು ವರದಿಯನ್ನು ನೀಡಬೇಕೆಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಜೂ.30ಂದು ಆದೇಶ ಹೊರಡಿಸಿದ್ದರು. ಚಿರತೆಯ ನಾಲ್ಕು ಕಾಲುಗಳನ್ನು ಕಡಿಯಲಾಗಿತ್ತು. ಎಂಬ ಮಾಹಿತಿ ಕಚೇರಿಗೆ ಬಂದಿದೆ. ಚಿರತೆಯ ಉಗುರುಗಳಿಗಾಗಿ ಚಿರತೆ ಹತ್ಯೆ ನಡೆದಿದೆ ಎನ್ನಲಾಗಿದ್ದು, ಅಧಿಕಾರಿಗಳು ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದಾರೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಎಪಿಸಿಸಿಎ್ ನೇತೃತ್ವದ ತಂಡದಿಂದ ತನಿಖೆ ನಡೆಸಿ ಇದು ನಿಜವಾಗಿದ್ದಲ್ಲಿ ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಶಿಾರಸ್ಸಿನೊಂದಿಗೆ 7 ದಿನಗಳ ಒಳಗಾಗಿ ವರದಿ ಸಲ್ಲಿಸಲು ಸೂಚನೆ ನೀಡಿದ್ದರು. ಈಗಾಗಲೇ ಸೂಚನೆ ನೀಡಿರುವ ದಿನಗಳು ಮುಕ್ತಾಯವಾದೆ. ವರದಿಯೂ ಸಲ್ಲಿಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪತ್ತೆಯಾಗಲೇ ಇಲ್ಲ ಕೋತಿಗಳ ಕೊಲೆಗಾರರು:

ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ಗ್ರಾಮದ ಬಳಿ 19 ಕೋತಿಗಳಿಗೆ ವಿಷ ಹಾಕಿ, ತಲೆಯ ಮೇಲೆ ಹೊಡೆದು ಕೊಂಡಿದ್ದ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಅರಣ್ಯ ಇಲಾಖೆ ತನಿಖೆ ನಡೆಸುತ್ತಿದ್ದು, ಕೋತಿಗಳ ಸಾವಿಗೆ ಕಾರಣರಾದವರು ಸೆರೆ ಸಿಕ್ಕಿಲ್ಲ. ಐದು ಹುಲಿಗಳ ಸಾವಿನ ಪ್ರಕರಣ ಮಾಸುವ ಮುನ್ನವೇ ಕೋತಿಗಳ ಮಾರಣ ಹೋಮ ನಡೆದಿತ್ತು. ಹುಲಿಗಳ ಸಾವಿಗೆ ಕಾರಣರಾದ ಆರೋಪಿಗಳಿಗೆ ಕಾನೂನಿನಡಿ ವಿಧಿಸುವ ಶಿಕ್ಷೆಯ ಕುರಿತು, ವನ್ಯಜೀವಿಗಳಿಗೆ ವಿಷ ಹಾಕಿ ಸಾಯಿಸುವ ಕೃತ್ಯಗಳ ಕುರಿತು ಜಿಲ್ಲೆಯಲ್ಲಿ ಚರ್ಚೆಯ ಕಾವು ಏರಿರುವ ಸಂದರ್ಭದಲ್ಲೇ ಕೋತಿಗಳ ಮಾರಣ ಹೋಮ ನಡೆದಿತ್ತು.

ಕೊತ್ತಲವಾಡಿಯಲ್ಲಿ ಮತ್ತೆ ದುರಂತ:

ಕರಿಕಲ್ಲು ಕ್ವಾರಿ ಬಳಿ ಅನುಮಾನಾಸ್ಪದವಾಗಿ ಮೃತಪಟ್ಟ ಚಿರತೆ ಪ್ರಕರಣದಂತೆಯೇ ಕೆಲವು ವರ್ಷಗಳ ಹಿಂದೆ ಈ ಭಾಗದಲ್ಲಿ ಹುಲಿ ಮೃತಪಟ್ಟಿತ್ತು. ಚಿರತೆ ಸತ್ತಿರುವ ಸಮೀಪದಲ್ಲೇ ನಾಯಿ ಮತ್ತು ಹಸುವಿನ ಕಳೇಬರ ಪತ್ತೆಯಾಗಿರುವುದರಿಂದ ಇವುಗಳಿಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.

ವನ್ಯಜೀವಿಧಾಮಕ್ಕೆ ಹೊಸ ಡಿಸಿಎ್... ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದ ಮಲೆ ಮಹದೇಶ್ವರ ವನ್ಯಜೀವಿಧಾಮಕ್ಕೆ ಹೊಸ ಡಿಸಿಎ್ ಆಗಮನವಾಗಿದೆ. ಈ ಹಿಂದೆ ಇದ್ದ ಚಕ್ರಪಾಣಿ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಇವರ ಸ್ಥಾನಕ್ಕೆ ಬೆಂಗಳೂರು ಕೇಂದ್ರ ಸ್ಥಾನದಲ್ಲಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್‌ಕುಮಾರ್‌ಗೆ ಹೆಚ್ಚುವರಿ ಪ್ರಭಾರ ಜವಾಬ್ದಾರಿ ನೀಡಲಾಗಿತ್ತು. ಇದೀಗ ಈ ಹಿಂದೆ ಮಡಿಕೇರಿ ಡಿಸಿಎ್ ಆಗಿದ್ದ ಭಾಸ್ಕರ್ ವರ್ಗಾವಣೆಯಾಗಿ ಸ್ಥಳ ನಿರೀಕ್ಷೆಯಲ್ಲಿದ್ದರು. ಇವರನ್ನು ವನ್ಯಜೀವಿಧಾಮದ ಡಿಸಿಎ್ ಆಗಿ ನಿಯೋಜನೆ ಮಾಡಲಾಗಿದೆ. ಶುಕ್ರವಾರ ಅಧಿಕಾರವಹಿಸಿಕೊಂಡಿದ್ದಾರೆ.

ಐದು ಹುಲಿಗಳ ಸಾವಿನ ಪ್ರಕರಣದ ತನಿಖೆಗಾಗಿ ರಚನೆಯಾಗಿದ್ದ ಸಮಿತಿಯ ವರದಿ ಮತ್ತು ಕೌದಳ್ಳಿ ವಲಯದಲ್ಲಿ ಚಿರತೆ ಮೃತಪಟ್ಟಿದ್ದ ತನಿಖೆಯ ವರದಿಯನ್ನು ಸೋಮವಾರ ಸಲ್ಲಿಕೆಯಾಗಲಿದೆ. ಹೀರಾಲಾಲ್, ಸಿಸಿಎ್, ಚಾಮರಾಜನಗರ ವೃತ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net