ಮುಂದುವರೆದ ಚಿರತೆ ಸೆರೆ ಕಾರ್ಯಾಚರಣೆ: ಮೂರು ದಿನವಾದರೂ ಸುಳಿವು ಸಿಕ್ಕಿಲ್ಲ

mysore
Published on

ಮೈಸೂರು: ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡಿರುವ ಚಿರತೆ ಕಾರ್ಯಾಚರಣೆ ಗುರುವಾರವೂ ಮುಂದುವರಿಯಿತು. ಆದರೆ, ಅದು ಗುರುತುಗಳು ಪತ್ತೆಯಾಗಲಿಲ್ಲ.

ಚಿರತೆ ಮಂಗಳವಾರ ಕಾಣಿಸಿಕೊಂಡಿತ್ತು. ಆ ದಿನವೇ ಅರಣ್ಯ ಇಲಾಖೆಯಿಂದ ಚಿರತೆ ಸೆರೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಮೂರು ದಿನವಾದರೂ ಅದರ ಸುಳಿವು ಸಿಕ್ಕಿಲ್ಲ.

ಬುಧವಾರ ರಾತ್ರಿಯಿಂದ ಈವರೆಗೂ ಕ್ಯಾಮರಾ ಟ್ರ್ಯಾಪ್‌ಗಳಲ್ಲಿಯಾಗಲಿ ಅಥವಾ ಕ್ಯಾಂಪಸ್‌ನಲ್ಲಿನ ಸಿಸಿ ಕ್ಯಾಮರಾಗಳಲ್ಲಿಯಾಗಲಿ ಚಿರತೆಯ ಯಾವುದೇ ಚಲನವಲನ ಕಂಡು ಬಂದಿಲ್ಲ. ಯಾವುದೇ ಹೊಸ ಹೆಜ್ಜೆ ಗುರುತುಗಳೂ ಕಂಡುಬಂದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ್ ತಿಳಿಸಿದ್ದಾರೆ.

ಥರ್ಮಲ್ ಡ್ರೋನ್ ಕ್ಯಾಮರಾ ಮೂಲಕ ನಿಗಾ ವಹಿಸಲಾಗಿದೆ. ಜತೆಗೆ, ಸಿಬ್ಬಂದಿ ಬಳಸಿ ಕಾರ್ಯಾಚರಣೆ ಚಾಲ್ತಿಯಲ್ಲಿ ಇದೆ. ಇನ್ಫೋಸಿಸ್ ಕ್ಯಾಂಪಸ್‌ಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲೂ ಕೂಂಬಿಂಗ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಸೆರೆ ಹಿಡಿಯುವ ಕೇಜ್‌ಗಳನ್ನೂ ಅಳವಡಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದು ನಿರಂತರವಾಗಿ ಕಾರ್ಯಾಚರಣೆ ಮುಂದುವರಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net